Wednesday, September 10, 2014

' ಎಕ್ಕ, ರಾಜ, ರಾಣಿ '

ರ್ರೀ... ಈಗ ನೀವೆಲ್ಲಿದ್ದೀರಿ, ಹೀಗೆ ಹೋಗಿ ಬರುವೆ ಎಂದು ನನ್ನಿಂದ ಹಣ ಪಡೆದು ಹೋದವರು
ಇಷ್ಟು ಹೊತ್ತಾದ್ರು ಮನೆಗೆ ಬರದೆ ಅಲ್ಲೇನ್ ಮಾಡ್ತಿದ್ದೀರ
ಮತ್ತೇ... ಕುಡಿಯೋ ಚಾಳಿ ಮುಂದುವರಿಸಿದಿರೋ... ಹೇಗೆ ? ಛೇ..!! ಎಷ್ಟಾದ್ರು ನಿಮ್ ಬುದ್ಧಿ ಡೊಂಕು ಡೊಂಕೇನೆ ಬಿಡಿ
ಲೆ ಲೇ.... ನಿಮ್ಮೀ... ನಿನ್ನಾಣೆಗೂ ಕುಡಿಯೋಲ್ಲಾಂತ
ಆಣೆ, ಪ್ರಮಾಣ ಮಾಡಿ ಕುಡಿತೀನಿ ಏನೇ ನಾನು ...?
ನೋಡು ನೀ ಹೀಗೆಲ್ಲ ನನ್ನ ಮಧ್ಯೆ ಮಧ್ಯೆ ಡಿಸ್ಟರ್ಬ್ ಮಾಡ್ಬೇಡ ಇಂಪಾರ್ಟೆಂಟ್ ಡಿಸ್ಕಷ್ನ್ ಲ್ಲಿದ್ದೀನಿ
ಮೊದಲು ಫೋನ್ ಇಡು
ಛೇ...!! ಮತ್ತೆ ಏನೆ ನಿನ್ನ ದರಿದ್ರದ ಕಾಟ
ನೆಮ್ಮದಿಯಾಗಿ ಆಟ ಆಡೋಕು ಬಿಡಲ್ಲ
ಮನೆಗೆ ಬರುವಾಗ ಒಂದಷ್ಟು ಹೂವು ಸ್ವೀಟು ತನ್ನಿ
ಇಂದು ಪೂರ್ಣಿಮೆ...!!
ಈಗ್ಲಾದ್ರೂ ಹೇಳ ಬಾರದೇ... ನೀವೂ...
ಎಕ್ಕ, ರಾಜ, ರಾಣಿ ನನ್ನಾ ... ಕೈಯೊಳಗೆ
ಇಡಿ ಮಣ್ಣೂ.... ನಿನ್ನಾ ಬಾಯೊಳಗೇ...
ಬೆಬ್ಬ ಬೆಬ್ಬ ಬೆಬ್ಬೇ..... ಹೆಹೆಹೇ.... ಇದು ಹಾಡೇ... ನಿಮ್ಮೀ..
ನೀ ಏನೇನೋ ನನ್ನ ತಪ್ ತಿಳಿಬೇಡ್ವೇ ನನ್ನ ನಂಬೇ...
ಓಹ್ ಓಹೋ... ಹೀಗೋ... ಯಜಮಾನ್ರ ವಿಷಯ
ಕುಡಿಯೋದ್ ಬಿಟ್ ಹೋಸ ಆಟ ಶುರು ಮಾಡ್ಕೊಂಡ್ರೋ...
ಬನ್ನಿ ಮನೆಗೆ ನಿಮಗಿದೆ ರಾತ್ರಿಗೆ ಹಬ್ಬ !!

1 comment:

  1. Original ರಾಣಿಗೇ ಯಾಮಾರಿಸಿ ಇಷ್ಟು ದಿನ ಚಮಕ್ ರಾಣಿಗೆ ಜೋತು ಬಿದ್ದಿದ್ದಾಯಿತು. ಆ ಮೇಲೆ ಅಮಲು ಅಮಲು ಅಂತ ಕಿಕ್ಕೇರಿಸಿಕೊಂಡ್ರೀ.
    ಈವಾಗ ಎಕ್ಕಾ ರಾಜ ರಾಣೀ ಅಂತಿದ್ದೀರ.

    ಮನೆಗೆ ಬನ್ನಿ ನಿಮಗೈತೆ "ಬಿಸಿ ಬಿಸಿ ಕಜ್ಜಾಯ, ರುಚಿ ರುಚಿ ಕಜ್ಜಾಯ ಮಾಡಿಕೊಡಲೆ ನಾನು?"

    ReplyDelete