Wednesday, September 3, 2014

" ಸಿಹಿ - ಕಹಿ " ಭಾಗ - ೨

ನಿಂದು ಒಳ್ಳೆ ಕಾಟವಾಯ್ತಲ್ಲೇ ....
ನೆಮ್ಮದಿಯಾಗಿ ಊಟ ಮಾಡುವಂತಿಲ್ಲ
ನಿನ್ನ ಜೊತೆ ಸುಖವಾಗಿ ನಿದ್ರಿಸುವಂತಿಲ್ಲ
ಮದುವೆಯಾಗಿ ಮೂರು ತಿಂಗಳಾಗಿಲ್ಲ
ಆಗಲೇ ... ಒಂದಿಲ್ಲೊಂದು ರಂಪಾಟ
ನಿಮ್ಮ ಅಮ್ಮ , ಅಕ್ಕ ಹಾಗಂದರು,
ತಂಗಿಯರು ಹೀಗಂದರು
ಸಾಲದಕ್ಕೆ ಬೇರೆ ಮನೆ ಮಾಡಿ ಎನ್ನುವೆ
ಇರುವ ಮೂವರಿಗೆ ಒಂದಷ್ಟು
ಅಡಿಗೆ ಮಾಡಿ ಬಡಿಸಲು ನಿನ್ನ ಕೈಯಲ್ಲಿ ಆಗದು
ಘಂಟೆಗಟ್ಟಲೆ ಫೋನಲ್ಲಿ ನಿಮ್ಮವರ ಜೊತೆ
ಮನೆ ಮುರುಕ ಮಾತುಗಳ ಸಂಭಾಷಿಸುವೆ
ಸಣ್ಣಪುಟ್ಟ ಕೆಲಸಗಳ ಮಾಡಿ ಕೊಟ್ಟರೆ
ಅಮ್ಮನಿಗೂ ಖುಷಿ, ಕೊಂಚ ಆರಾಮವಾಗದೆ
ವಯಸ್ಸಾದ ಅಮ್ಮ ಬೆಳ್ಳಂಬೆಳಿಗ್ಗೆ ಎದ್ದು
ಮನೆ ಕೆಲಸಗಳ ದಿನನಿತ್ಯ ಮಾಡಬೇಕೆ
ಅವರಿವರ ದೂರುವುದೇ... ನಿನ್ನ ದಿನಚರಿಯಾಯ್ತು ;
ಅಕ್ಕ - ತಂಗಿಯರು ಮನೆಗೆ ಬರುವಂತಿಲ್ಲ
ಹಿರಿಯರು ಒಂದೆರಡು ಬುದ್ಧಿ ಮಾತ ಹೇಳಿದರೆ
ಕೇಳುವಷ್ಟು ಸಹನೆ, ಸಂಸ್ಕಾರವಿಲ್ಲ
ಅರ್ಥಮಾಡಿಕೊಳ್ಳುವ ಜಾಯಮಾನದವಳಲ್ಲ
ಅವರಿಗೇ... ಎದಿರು ವಾದಿಸುವಷ್ಟು ಸೊಕ್ಕು
ಹೊಸ ವಾತಾವರಣ, ಮನೆಯವರ ಜೊತೆ ಹೊಂದಿಕೊಳ್ಳಲು ಒಂದಷ್ಟು ಸಮಯ ಕೊಟ್ಟು
ನಾ ಇಲ್ಲಿಯವರೆಗೆ ಕಾದಿದ್ದು ನನ್ನದೇ ತಪ್ಪು
ನೋಡು ನನಗೂ... ಹೇಳಿ ಹೇಳಿ ಸಾಕಾಯ್ತು
ಬೇಕಾದರೆ ನಿನ್ನ ಬಿಟ್ಟು ಬಿಡುವೆನೆ ಹೊರತು
ಹೊತ್ತೆತ್ತವಳ ನನ್ನ ಉಸಿರಿರುವರೆಗೂ ಬಿಡಲಾರೆ
ಹೊಂದಿಕೊಂಡು ಬಾಳುವುದಿದ್ದರೆ ಬಾಳು 

1 comment:

  1. ’ಹೊತ್ತೆತ್ತವಳ ನನ್ನ ಉಸಿರಿರುವರೆಗೂ ಬಿಡಲಾರೆ
    ಹೊಂದಿಕೊಂಡು ಬಾಳುವುದಿದ್ದರೆ ಬಾಳು ’
    ಹೀಗೆ ಮನಸು ಮಾಡಬೇಕು ಸಾರ್. ಆಗಲೇ ತುತ್ತ ಮುತ್ತ ಎರಡಕ್ಕೂ ನ್ಯಾಯ.

    ReplyDelete