Thursday, September 4, 2014

ಯಜ "ಮಾನ"

ಮದುವೆಗೆ
ಮುಂಚೆ
ನಾ ಹೇಗೆಲ್ಲಾ
ಇದ್ದೆ;
ಮದುವೆಯ
ನಂತರ
ನನ್ನವಳು
ಹೇಳಿದ್ದಕ್ಕೆಲ್ಲ
ಹ್ಞೂಂಗುಟ್ಟಿದರೆ
ಉಂಟು
ಊಟೋಪಚಾರ
ಇಲ್ಲದಿದ್ದರೆ
ಕೆಡುವುವಳು
ಇಡೀ ರಾತ್ರಿಯೆಲ್ಲಾ
ಉಪವಾಸ !!
ನನ್ನ
ಜುಟ್ಟು-
ಜನಿವಾರವೆಲ್ಲ
ನನ್ನವಳ
ಕೈಯಲ್ಲಿರುವಾಗ
ನಾ ಏನೂ
ಮಾತಾಡುವಂತಿಲ್ಲ
ಮಾಡುವಂತಿಲ್ಲ
ಹೆಸರಿಗೆ ಅಷ್ಟೆ
ಮನೆ ಯಜಮಾನ !

1 comment:

  1. ಹಸೆ ಮಣೆಯಲ್ಲಿ ಆಕೆ ತಲೆ ತಗ್ಗಿಸುವುದು. ಮುಂದೆ, ಯಜಮಾನರನ್ನು ಬಗ್ಗುಬಡಿಯುವ ಮುನ್ಸೂಚನೆ! :)

    ReplyDelete