Monday, March 24, 2014

ಚೆಲುವೇ... ನೀ ಎಲ್ಲಿರುವೇ....?

ನೀನು ಬಂದ ಮೇಲೆ
ಈ ಹೃದಯದೊಳಗೆ
ಬೇರೆ ಜಾಗ ನಿನಗಿನ್ನೆಲ್ಲಿದೇ...
ನಿಲ್ಲದು ಈ ಚಡಪಡಿಕೆ
ಸಲ್ಲದು ಈ ನಡವಳಿಕೆ
ನಿದಿರೆಯು ಏಕೋ ದೂರಾ...
ಮನಸ್ಸಿಗೂ ಬಲು ಭಾರ
ನಿನ್ನನು ಕಾಣದೆ ನಾನು
ಹೇಗಿರಲಿ ಹೇಳು ನೀನು...
ಕಣ್ಣಲೇ ನನ್ನಾ... ಕೆಣಕುತ
ನಗುತಲೇ ಮನವ ಸೆಳೆದೆ
ಪ್ರೀತಿಯ ನೀ ಸುರಿಸುತ
ನನ್ನನೇ ನೀ ಮೈಮರೆಸಿ
ಏತಕೆ ನೀ ಹೀಗೆ ಕಾಡಿರುವೆ
ಹೇಳಲು ನೀ ಬಾ... ಬಾರೆ
ಕಾಣದೆ ಇಂದು ನಿನ್ನನು
ಅಲೆಯುವ ನೊಂದು ನನ್ನನು
ನೀ ಹುಚ್ಚನ ಮಾಡಿರುವೆ
ಹೇಳದೆ ಕೇಳದೆ ನೀ ಎಲ್ಲಿರುವೆ ?

2 comments:

  1. ಚನ್ನಾಗಿದೆ ಸರ್ ನಿಮ್ಮ ಕವನ...

    ReplyDelete
  2. ಧನ್ಯವಾದಗಳು Vijay.B ಅವರೆ :-)

    ReplyDelete