Wednesday, March 5, 2014

" ಅತ್ತೆ v/s ಅಳಿಯ "

ಮದುವೆಯಾಗಿ ಏಳೆಂಟು ದಿನಗಳಾದರೂ,
ಮೊದಲ ರಾತ್ರಿಯ ಪ್ರಸ್ಥದ ಪ್ರಸ್ತಾಪವೇ ಇಲ್ಲ....
ಇಂದೋ .... ನಾಳೆಯೋ ...ಇರಬೇಕೆಂದು ಕೊಂಡರೆ
ನನಗೆ ಕಾದದ್ದಷ್ಟೇ .... ಬಂತು ಭಾಗ್ಯ ;
ಕೈಗೆ ಸಿಕ್ಕರೂ ಸಿಗದಂತೆ ಓಡಾಡುವ ನನ್ನವಳ ಕಂಡು
ಕೋಪ ಬಂದರೂ ಏನೂ ಮಾಡಲಾಗದ ಪರಿಸ್ಥಿತಿ
ಯಾರಿಗೆ ಹೇಳಿಕೊಳ್ಳಲಿ, ಬೇಡ ನನ್ನ ಫಜೀತಿ
ಇಷ್ಟು ವರ್ಷಗಳು ಬ್ರಹ್ಮಚಾರಿಯಂತಿದ್ದು
ಕಾಯ, ವಾಚ ಮನಸ ಕಾದಿದ್ದಲ್ಲದೆ ಈಗಲೂ ಕಾಯಲೇ...?

ಅಂತೂ ಇಂತು ಕೊನೆಗೂ .... ಸಿಕ್ಕಳಲ್ಲ ಎಂದು
ನನ್ನವಳ ಖುಷಿಯಿಂದ ಅಪ್ಪಿ ಮುದ್ದಿಟ್ಟರೆ,
ಅದೆಲ್ಲಿದ್ದಳೋ... ಅವಳಮ್ಮ ಅಳಿಯಂದಿರೇ.....
ಸ್ವಲ್ಪ ತಾಳಿ, ತಾಳಿಯಪ್ಪಾ .... ಘಳಿಗೆ, ವಾರ
ತಿಥಿ, ನಕ್ಷತ್ರ ಶುಭದಿನ ನೋಡುವುದು ಬೇಡವೇ...?
ಆಗಲೇ... ಅಷ್ಟೊಂದು ಅವಸರವೇ.....
ಏನು ಹುಡುಗರೋ... ಏನು ಕಥೆಯೋ.....!!
ಒಂದು ಹದಿನೈದು ದಿನ ನಿಮ್ಮಿಬ್ಬರಿಂದ ಕಾಯಲಾಗದೇ...?
ಆಮೇಲೆ ಇವೆಲ್ಲಾ ಇದ್ದದ್ದೇ! ಪ್ರಸ್ಥ, ಬಸಿರು ಬಾಣಂತಾನ !!!

ಅಯ್ಯೋ .... ಅಮ್ಮಾ....
ನಿನ್ನದೇನು ಗಂಡ ಹೆಂಡಿರ ಮಧ್ಯೆ
ನೋಡು ಹೇಗೆ ಕೋಪಿಸಿಕೊಂಡು ಹೋದರು,
ಇನ್ನೇನು ನಿನ್ನಿಷ್ಠದಂತೆ ಮದುವೆ ಮುಗಿಯಿತಲ್ಲ ;
ಈ ಶಾಸ್ತ್ರ, ಸಂಪ್ರದಾಯ ಅಂತ ಏನೇನೋ ಹೇಳಿ ಪ್ರಸ್ಥವ ಮುಂದೂಡಬೇಡ, ಅವರು ಕೈಕೊಟ್ಟಾರು....!

ಲೆ ಲೇ.... ಪೆದ್ದೀ ..... ಕಬ್ಬಿಣ ಕಾದಾಗಲೇ
ಬೇಕಾದಂತೆ ಆಕಾರ ಕೊಡಲು ಸಾಧ್ಯ
ಸುಮ್ಮನೆ ನಾ ಹೇಳಿದಂತೆ ಕೇಳು
ನೀ ಹಿಂದಿಂದೆ ಸುತ್ತಿದರೇನು ಬಂತು ಪ್ರಯೋಜನ ....
ನೀ ಹೇಳಿದಕ್ಕೆಲ್ಲಾ ... ನಿನ್ನ ಗಂಡ ಊಂ ಗುಟ್ಟಬೇಕು
ನೋಡು ನಿನ್ನ ಅಪ್ಪ , ನಾ ಹೇಳಿದಕ್ಕೆಲ್ಲಾ .....
ಹೇಗೆ ಹೌದೌದೆಂದು ತಲೆಯಲ್ಲಾಡಿಸುವರು
ಇದು ಇದು ಇರಬೇಕೇ.... ಹೆಣ್ಣಲ್ಲಿ ಜಾಣತನ ....

ಎಲಾ.... ಘಟವಾಣಿ ಅತ್ತೇ....
ಹೀಗೋ.... ನಿಮ್ಮ ವಿಷಯ , ನಾ ಮಾವನಂತಲ್ಲ
ಇರಲಿ ಇರಲಿ ನಿಮಗೆ ಹೇಗೆ ಬುದ್ಧಿಯ
ಕಲಿಸಬೇಕೆಂದು ನನಗೆ ಗೊತ್ತು ;
ನೀವು ಸೇರೆಂದರೆ ನಾ ಸವ್ವಾಸೇರು
ನಾಳೆ ನೋಡಿ ಬೆಳ್ಳಂಬೆಳಿಗ್ಗೆ ಕಾದಿದೆ ಹಬ್ಬ !!!

ಹಾಲಕ್ಕಿ ನುಡಿದೈತೆ ಹಾಲಕ್ಕಿ ನುಡಿದೈತೆ
ಮನೆ ಬಾಗಿಲಿಗೆ ಬಂದವಳೆ ಅಟ್ಟಿ ಲಕ್ಕಮ್ಮ ತಾಯಿ
ಈ ಮನೆ ಮುತ್ತೈದೆಗೆ ವೈಧವ್ಯ ಕಾದೈತೆ ತಾಯಿ
ತಿಮ್ಮಪ್ಪನ ಬೆಟ್ಟ ಅತ್ತಿ, ದಂಪತಿಗಳಿಬ್ಬರೂ ಮುಡಿಕೊಟ್ಟು;
ಸೇವೆ ಮಾಡಲು, ಬಂದ ದೋಷ ಕಳೆದು
ಮುತೈದೆ ಭಾಗ್ಯದಾ ಜೊತೆ ಕನಕ ವೃಷ್ಟಿ ಆಗುತೈತೆ ತಾಯಿ ಬರುವ ಅಮಾವಾಸ್ಯೆಗೂ ಮುನ್ನ ಮಂಗಳ ಕಾರ್ಯ ಆಗಬೇಕು ತಾಯಿ ಹಾಲಕ್ಕಿ ನುಡಿದೈತೆ ಹಾಲಕ್ಕಿ ನುಡಿದೈತೆ

5 comments:

  1. ಗಟವಾಣಿ ಅತ್ತೆ ಚಾಲೂಕಿ ಅಳೀಮಯ್ಯ! :-D

    ReplyDelete
    Replies
    1. ಕೆಲ ಗಟವಾಣಿ ಅತ್ತೆಯಂದಿರಿಗೆ ಇಂತಹ ಚಾಲೂಕಿ ಅಳಿಯ ಇರಲೇಬೇಕು, ಇಲ್ಲವಾದಲ್ಲಿ ಕಟ್ಟಿಕೊಂಡವಳು ಹಿತ್ತಾಳೆ ಕಿವಿಯಾದರೆ ಜೀವನ ಕಷ್ಟ ಕಷ್ಟ .... ಧನ್ಯವಾದಗಳು ಬದರಿನಾಥ ಪಲವಳ್ಳಿ ಸರ್.

      Delete
    2. This comment has been removed by the author.

      Delete
  2. ಹಾ ಹಾ...ಚೆನಾಗಿದೆ ಸಾರ್...

    ReplyDelete
    Replies
    1. ಧನ್ಯವಾದಗಳು ಚಿನ್ಮಯ ಭಟ್

      Delete