Wednesday, August 13, 2014

" ಸ್ಮೈಲ್ ಪ್ಲೀಸ್ ".... !!

ಫೋಟೊ ತೆಗೆಯುವವ
ಸ್ಮೈಲ್ ಪ್ಲೀಸ್ ಸರ್ ಅಂದ
ನನ್ನವಳ ಮುಖ ನೋಡಿ,
ನಾ ಗಂಭೀರವದನನಾದೆ !
ಅಪ್ಪಿತಪ್ಪಿ ನಾ ಅವಳ ಮುಂದೆ
ಬಾಯ್ತೆರೆಯುವಂತಿದೆಯೇ....
ತಮಾಷೆಗಾದರೂ.... ಸರಿಯೆ
ಎಲ್ಲರೆದೆರು ನಾ ನಗುವಂತಿಲ್ಲ;
ಮನೆಗೆ ಹೋದರೆ
ನನ್ನ ಸುಮ್ಮನೆ ಬಿಡುವಳೇ...
ಜನ್ಮ ಜಾಲಾಡಿಸಿ,
ಇದ್ದ ಬದ್ದ ಅವಳ ಸಿಟ್ಟೆನ್ನೆಲ್ಲಾ ಬೀರಿ 
ನನ್ನ ಮುವತ್ತೆರಡು ಹಲ್ಲುಗಳಿಗೂ
ಸಹಸ್ರನಾಮ ಮಾಡದಿರಳು...

2 comments:

  1. ಹಾಗಾದರೇ ಅತಿ ಶೀಘ್ರದಲ್ಲಿ ಪತಿ ದೇವರು ದಂತ ವೈದ್ಯರಿಂದ ಕೃತಕ ಹಲ್ಲು ಸೆಟ್ಟು ಕಟ್ಟಿಸಿಕೊಳ್ಳುವ ಯೋಗ ಇದೆ ಹಂಗಾಯಿತು.
    ಮುಂದುಂದಿ ಮುಸುಳ್ಳ ಪಂಡುಗ!

    ReplyDelete
    Replies
    1. ಮುಸಲದಾನಿ ಪಂಡುಗಮೋ.... ದೇವುಡೇ ಚೂಡಾಲಿ.

      Delete