Friday, August 15, 2014

" ಜಯ ಭಾರತಿ "

ನಾವೆಲ್ಲರೂ ಒಂದೇ ಭಾರತಾಂಬೆಯ ಮುಂದೆ ಮಂಡಿಯೂರಬೇಕು, ದಂಡಿಗೂ ಜೈ ಎನ್ನಬೇಕು
ಭಾಷೆ ಸಂಸ್ಕೃತಿ ನೂರಾರು, ಜಾತಿ ಧರ್ಮ ಹಲವು
ಉಸಿರಾಗಿಹ ಗಾಳಿ, ನಡೆದಾಡುವ ಈ ಭೂಮಿ
ಜೀವ ಬಲವಾಗಿಹ ಜಲ, ಎಲ್ಲರೊಳು ಮೈತಾಳಿ
ನರನಾಡಿಗಳಲ್ಲಿ ಹರಿವ, ಸುರಿವ ನೆತ್ತರೊಂದೇ....
ಮನುಜ ಮನುಜರ ನಡುವೆ
ದ್ವೇಷದ ಕಿಡಿ ಹಚ್ಚುವವರ ಕೊಂದು
ಧರ್ಮ ಧರ್ಮಗಳಲ್ಲಿ ವಿಷ ಬೀಜ ಬಿತ್ತುವವರ
ಸದೆಬಡಿಯೆ ನೀನು ಮತ್ತೊಮ್ಮೆ ಬರಬೇಕು ತಾಯಿ
ದುರುಳ ರಕ್ಕಸರ ರುಂಡ ಮುಂಡಗಳ ಚಂಡಾಡುತ ಅವರಟ್ಟಹಾಸಗಳ ಹುಟ್ಟಡಗಿಸೆ ದಂಡೆತ್ತಿ ಬಾ ತಾಯಿ
ಜಪಿಸೆ ಶಾಂತಿ ಸೌಹಾರ್ಧತೆಯ ಬಾಳ ಮಂತ್ರ
ನಾವೆಲ್ಲರೂ ಎಂದೆಂದಿಗೂ ಒಂದೆನ್ನುವ ತಂತ್ರ
ದಶ ದಿಕ್ಕಿಗೂ ಮೊಳಗಲಿ ನಿನ್ನಯ ಕೀರುತಿ
ಜಯ ಭಾರತಿ ಜಯ ಭಾರತಿ ಜಯ ಭಾರತಿ  

1 comment:

  1. ಒಳ ಗಡಿಗಳ ಅಳಿಸಿ, ಭಾಷೆ - ಜಾತಿ - ರಾಜಕೀಯ ಬಲಗಳನೆಲ್ಲ ಹಿಮ್ಮೆಟ್ಟಿ ಒಂದಾಗೋಣ. ಕಟ್ಟೋಣ ಹೊಸ ಭಾರತ. ಹೊಸ ಚೈತನ್ಯದ ಜೊತೆಗೆ...

    ReplyDelete