Monday, November 11, 2013

ಕಾಗೆಗಳು ನಾವ ನೀವ ???

ನಮ್ಮದೆಲ್ಲಾ ಒಂದೇ ಜಾತಿ, ಬಣ್ಣ
ನಿಮ್ಮಂತೇ ಜಾತಿ ಧರ್ಮಗಳಿಲ್ಲ
ಮಧ-ಮತ್ಸರ, ಸ್ವಜನ ಪಕ್ಷಪಾತ
ಮೋಸ ಕಪಟಗಳ ಅರಿವಿಲ್ಲವೇ ಇಲ್ಲ
ಮತ್ತೊಬ್ಬರ ಏಳಿಗೆಯ ಕಂಡು ಸಹಿಸದೆ ಕಾಲೆಳೆಯುವರೂ ಅಲ್ಲ;
ಎಲ್ಲೋ ಕದ್ದು, ಮುಚ್ಚಿಟ್ಟು
ತನ್ನದೆಂದು ತಿಂದರೆ
ನಮ್ಮವರೇ ಹೊರ ಹಾಕುವರು,
ಮತ್ತೆಂದೂ ಬಳಗಕ್ಕೆ ಸೇರಿಸಿ ಕೊಳ್ಳರು
ಇರುವಾಗ ಹಂಚಿ, ಇಲ್ಲದಾಗ
ಕರೆ ಕರೆದು ತಿನ್ನುವ
ನಾವೇ ನಿಮಗಿಂತ ಮೇಲು
ನೋಡಿ ನಮ್ಮಂತೆ
ನಿಮಗೆ ಕಪ್ಪನೆ ಬಣ್ಣವಿದೆಯೇ,
ರೂಪವಿದೆಯೆ
ಎಲ್ಲಿ ಎಂಜಲ ಕೈಯಲ್ಲಿನ
ಅನ್ನದ ಅಗುಳು ಬೀಳುವುದೋ
ಎಂದು ಹಾಗೆಯೇ ತಿನ್ನುವಿರಿ
ಕಾಗೆಗಳು ನಾವ ನೀವ ?????

No comments:

Post a Comment