Thursday, November 21, 2013

" ಆಧುನಿಕ ನಾರಿ "

ಆ...ಹಾ.... ರಾತ್ರಿಯಾದರೆ ಸಾಕು
ನಿಮಗೆ ನನ್ನ ಮೇಲೆ ಎಲ್ಲಿಲ್ಲದ
ಪ್ರೀತಿ ಉಕ್ಕುಕ್ಕಿ ಬರುತ್ತೆ ನೋಡಿ,
ಸಾಲದಕ್ಕೆ ಆ ನಿಮ್ಮ ಹೊಗಳಿಕೆಗೆ
ನಗೆಯ ಕಚಗುಳಿಗೆ, ಕುಡಿ ನೋಟಕೆ
ನಾನೇ ನಿಮ್ಮೊಳಗೆ ಕರಗಿ ಬಿಡುವೆ !
ರ್ರೀ.... ನೋಡಿ ಕಲಿಯಿರಿ ಅವರನ್ನ
ಏನು ಅನ್ಯೋನ್ಯತೆ, ಎಂಥಹ ಪ್ರೀತಿ
ಒಬ್ಬರನ್ನೊಬ್ಬರು ಬಿಟ್ಟಿರಲಾರದಷ್ಟು ಬಂಧನ ಸಂಜೆಯಾದರೆ ಸಾಕು ನಿಮ್ಮ ಅಪ್ಪ,
ಎಲ್ಲಿಂದಾದರೂ ಸರಿ, ಹೂ ಹುಡುಕಿ
ಮಲ್ಲಿಗೆಯೋ ಸಂಪಿಗೆಯೋ ಸಿಹಿಯ ತರದೆ
ಮನೆಗೆ ಎಂದೂ ಬಂದವರೇ ಅಲ್ಲ;
ಎಂದಾದರೂ ಒಂದು ಮೊಳ ಮಲ್ಲಿಗೆಯ ಹೂ
ನನಗಾಗಿ ಕೊಂಡು ತಂದಿದ್ದೀರ ನೀವು ?
ಹೌದೌದೇ..., ನನ್ನಮ್ಮಇಷ್ಟು ವಯಸ್ಸಾದರೂ
ಹಣೆಗೆ ಕಾಸಗಲದ ಕುಂಕುಮ, ಮುಡಿಗೆ ಹೂವು
ನಿತ್ಯ ಎರಡೂ ಕೆನ್ನೆಗಳಿಗೂ ಅರಿಷಿಣ ಹಚ್ಚಿ;
ಹೊರ ಬಂದರೆ ಸಾಕ್ಷಾತ್ ಮಂಗಳ ಗೌರಿಯೆ ನಿನಗೇಕೋ ಅವರ ಕಂಡರೆ ಹೊಟ್ಟೆಯುರಿ, ಅಸಮಧಾನ ?!
ನೀ ಎಂದಾದರೂ ಹೀಗೆ ಎದಿರು ಬಂದಿರುವೆಯೆ
ನಮ್ಮ ಸಂಸ್ಕೃತಿ ಆಚಾರ ವಿಚಾರಗಳು ಬೇಕಿಲ್ಲ
ನೀ ಎಂದಾದರೂ ಆಚರಣೆಗೆ ತಂದಿರುವೆಯೋ
ದಿನ ನಿತ್ಯ ಜಡೆ ಹೆಣೆಯುವವರು ಯಾರೆಂದು
ಕೂದಲಿಗೆ ಕತ್ತರಿ, ಜಡೆಯ ಜಾಗದಲ್ಲಿ ಬಾಬ್ ಕಟ್
ಇನ್ನು ಸೀರೆಗೆ ಬದಲಾಗಿ ಜೀನ್ಸ್ ಪ್ಯಾಂಟ್ ಟೀ ಶರ್ಟ್ ಇವೆಲ್ಲಾ ಧರಸಿ, ಅಲಂಕರಿಸಿದ ನೀ " ಆಧುನಿಕ ನಾರಿ " ಕೇಳಿದರೆ ದುಡಿಯುವ ಮಹಿಳಾ ಮಣಿ ಎನ್ನುವೆ !!

No comments:

Post a Comment