Sunday, November 10, 2013

" ಜಿಪುಣಾಗ್ರೇಸ "

ಓ ಹೋ...ಬರಬೇಕು ಬರಬೇಕು
ಈ ಬಡವನ ಮನೆಗೆ ಮಹಾಲಕ್ಷ್ಮೀ
ಬಂದಂಗಾಯ್ತು ನೀವು ಬಂದದ್ದು
ಆರೋಗ್ಯವೆ, ಕುಶಲವೇ ! 
ಮನೆಯವರೆಲ್ಲರೂ ಸೌಖ್ಯವೆ ಬಾವ !
ಈ ಹೂವು ಹಣ್ಣು, ಸಿಹಿ ಇದೆಲ್ಲಾ ಬೇಕಿತ್ತೆ;
ಹೆ ಹೇ... ನಿಮ್ಮ ತಂಗಿಯ ಮೇಲಿನ ಪ್ರೀತಿಗೆ
ನಾ ಬೇಡ ಎನ್ನಲಾದೀತೆ ಇಲ್ಲಿ ಕೊಡಿ ಬಾವ
ನಿಮಗೇಕೆ ಬೇಸರ, ಕೈಗಳಿಗೂ ಭಾರ;
ಬರುವ ಮುಂಚೆ ಫೋನಾಯಿಸಿದ್ದರೆ ಸಾಕಿತ್ತು
ನಾನೇ ಎಲ್ಲಾ ವಿಷಯವ ತಿಳಿಸುತ್ತಿದ್ದೆ
ಈ ಬಿರು ಬಿಸಿಲಲ್ಲಿ ಮನೆಗೆ ಬರಬೇಕಿತ್ತೆ;
ಅವಳೂ ಇಲ್ಲ, ಇಂದು ಅಡುಗೆಯೂ ಇಲ್ಲ
ಕಾರ್ತಿಕ ಸೋಮವಾರ ವ್ರತ, ಉಪವಾಸ
ಸುಮ್ಮನೆ ಬಂದ ದಾರಿಗೆ ಸುಂಕವಿಲ್ಲ ಅಷ್ಟೆ;
ಬನ್ನಿ ಸುತ್ತಾಡಿ, ಆ ದೇವರ ದರ್ಶನ ಮಾಡಿ
ದೇವಸ್ಥಾನದಿ ತೀರ್ಥ ಪ್ರಸಾದ ಸ್ವೀಕರಿಸಿ
ಹಾಗೆಯೇ ನೀವು ಊರಿಗೆ ಹೋಗುವಿರಂತೆ !  

No comments:

Post a Comment