Wednesday, November 13, 2013

ಗಂಡಸರಿಗೇಕೆ " ಗೌರಿ " ದುಖಃ ?!!

ರ್ರೀ..... ಪ್ರಭುಗಳೇ, ಗಂಟೆ ಹತ್ತಾಯ್ತು
ಊಟ ಹೊಟ್ಟೆಗೆ ಬಿದ್ದರೆ ಸಾಕು, 
ಆಕಳಿಸಿ ನಿದ್ದೆ ಎಂದು, ಸುಮ್ಮನೆ ಮಲಗದೆ
ಎಂತಾದ್ರಿ ಅಂತರ್ಜಾಲದಲ್ಲಿ ನೋಟ;
ಮಾಡುವುದಿದ್ದರೆ ಇಲ್ಲಿ ಬಂದು ಮಾಡಿ
ಆಗ ಗೊತ್ತಾಗುತ್ತೆ ನಿಮ್ಮ ಶೌರ್ಯ, ಪ್ರತಾಪ !
ನಾಳೆಗೆ ತರಕಾರಿ ಹಚ್ಚಿಡುವುದೋ
ಅಥವಾ ಪಾತ್ರೆಗಳ ತೊಳದಿಡುವುದೋ
ಮಕ್ಕಳ ಬಟ್ಟೆಗಳ ಇಸ್ತ್ರೀ ಮಾಡಿಟ್ಟರೆ
ನನಗೂ ಒಂಚೂರು ಆರಾಮವಾದೀತು
ನಾನೊಬ್ಬಳೇ ಎಷ್ಟೂಂತ ಮಾಡಲಿ ಹೇಳಿ
ಈ ಮಕ್ಕಳ ಗಮನಿಸಿ, ಮನೆಗೆಲಸ ಮಾಡಿ
ಸಾಲದಕ್ಕೆ ನಿಮ್ಮ ಬೇಕು ಬೇಡಗಳ ಪೂರೈಸಿ
ನಿದ್ರೆಗೆ ಜಾರಿದರೆ ನಿಮ್ಮ ಬಾಹು ಬಂಧನ ಬೇರೆ !
ನೋಡಿ, ನನಗೂ ನಿಮ್ಮ ಜೊತೆ
ಏಗೀ ಏಗಿ ಸಾಕಾಯ್ತು;
ನಾಳೆಯಿಂದ ಆ ರೂಮಿನಲ್ಲಿ
ನೀವೊಬ್ಬರೇ ಬೇರೆ ಮಲಗಿ
ನಾ ಮಕ್ಕಳ ಜೊತೆ ಮಲಗುವೆ
ನಿಮಗಿಷ್ಟ ಬಂದಂತೆ ರಾತ್ರಿಯಿಡೀ
ಕವನ, ಕತೆಗಳ ಬರೆದು
ಅಂತರ್ಜಾಲದಲ್ಲಿ ಪ್ರಕಟಿಸಿ;
ಎಲ್ಲರಿಂದ ಮೆಚ್ಚುಗೆಯ ಪಡೆಯಿರಿ !!
ಲೆ ಲೇ.......... ಭಾಮಾ.....,
ನೀನೇ ಹೀಗೆಲ್ಲಾ ಮಾತಾಡುವುದು
ಯಾವ ಕ್ಷಣದಲ್ಲಿ ಬದಲಾಗುವಿಯೋ,
ಆ ಬ್ರಹ್ಮನಿಗೂ ಗೊತ್ತಿರಲಾರದು ನೋಡು
ನಾ ಎಂದಾದರೂ ಏನೂ ಮಾಡದೆ
ಹಾಗೆಯೇ ಸುಮ್ಮನೆ ತಿಂದಿರುವೆನೇ;
ನೀನೇ ಹೇಳುವೆಯಲ್ಲೇ ಮಾತು ಮಾತಿಗೂ
ದುಡಿದು ಸುಸ್ತಾಗಿರುವಿರಿ ಕಾಫಿ ಕುಡಿದು
ಸುಧಾರಿಸಿಕೊಳ್ಳಿ , ಬೇಗ ಅಡುಗೆ ಮಾಡುವೆ
ಹತ್ತಿರ ಬರಬೇಡಿ, ಬಂದರೆ ನಿಮ್ಮಿಂದ ತೊಂದರೆ
ನೀವು ಬೆಂಕಿ, ನಾನು ಬೆಣ್ಣೆ ದೂರ ಇರಿ; ಕರಗಿದರೆ ಕೆಲಸವೂ ಹಾಳು, ನಿಮಗೇಕೆ " ಗೌರಿ " ದುಖಃ !!

2 comments:

  1. ನಮಗೆ ಗೊತ್ತಾಗದ ವಿಷಯ,...ಸಧ್ಯಕ್ಕೆ ನೋ ಕಮೆಂಟೂ :P

    ReplyDelete
  2. ಬ್ಲಾಗ್ ಗೆ ಭೇಟಿಯಿತ್ತು , ಒಂದೆರಡು ನುಡಿ ಮುತ್ತುಗಳ ಉದುರಿಸಿದಕ್ಕೆ ಧನ್ಯವಾದಗಳು ಚಿನ್ಮಯ ಭಟ್ರೇ...

    ReplyDelete