Sunday, November 3, 2013

" ಇರಳುಗಣ್ಣು "

ರ್ರೀ...ತಾರಾ.., ಅಂತೂ..ಸಿಕ್ಕಿದರಲ್ಲ
ಏನೋ..ನೀವು ನನ್ನ ಪರಿಚಯಸ್ತರು
ಮೇಲಾಗಿ ತುಂಬಾ... ಬೇಕಾದವರು
ನಿಮಗೊಂದು ವಿಷಯ ಹೇಳ್ಲೇ ಬೇಕ್ರೀ
ಇಷ್ಟೊತ್ತಿಗೆ ಬೇರೆಯವರು ಆಗಿದ್ದಿದ್ದರೆ
ನಿಮ್ಮ ಮನೆ, ಮಾನ ಮರ್ಯಾದೆ ಎಲ್ಲಾ
ಮೂರು ಕಾಸಿಗೆ ಹರಾಜ್ ಹಾಕತಿದ್ದರು

ನೀವಾದರೂ ಏನ್ ಮಾಡಕ್ಕಾಗುತ್ತೆ ಹೇಳಿ
ಅದೇನು ಹೆಂಗಸರ ಕಂಡೇ ಇಲ್ಲದವರ ತರ
ನಿಮ್ಮ ಮನೆಯವರು ಸಂಜೆಯಾದರೆ ಸಾಕು
ಒಂದೇ ಸಮ ಕಣ್ಣ ಕಣ್ಣ ಬಿಟ್ಕೊಂಡ್ ನೋಡ್ತಾರೆ
ಏನೋ ಉಪ್ಪು ಖಾರ, ಹುಳಿ ತಿನ್ನೋ ದೇಹ
ಇದ್ದದ್ದೇ ಈ ಗಂಡಸರಿಗೆ ನೋಡೋ ಚಪಲ
ನೀವಾದ್ರೂ ರಾತ್ರಿ ಹೊತ್ತು ನಿಮ್ ಮನೆಯರಿಗೆ ಒತ್ತಾಸೆಯಾಗಿ ಅವರಿಚ್ಚೆಯಂತೆ ಇರಬಾರದೇ

ಅಯ್ಯೋ.... ಏನ್ ಹೇಳ್ಲಿರ್ರಿ ನನ್ನ ಪ್ರಾರಬ್ದ ಕರ್ಮ ಬಂಗಾರದಂತ ಹುಡುಗ, ಅತ್ತೆ ಮಾವ, ನಾದಿನಿ
ಯಾರೂ ಇಲ್ಲ, ಬೇಕಾದಷ್ಟು ಕರಗದ ಆಸ್ತಿಯಿದೆ ವರದಕ್ಷಿಣೆ ವರೋಪಚಾರ ಇಲ್ಲಾಂತ ನಮ್ಮಪ್ಪ
ನಾನು ಬೇಡ್ಬೇಡ್ಡಾಂದರೂ ಮದುವೆ ಮಾಡಿಸಿದ್ರು

ಈಗ ನೋಡಿ ನಾ ತಲೆ ಎತ್ಕೊಂಡು ತಿರಗಲಾರೆ ಅಳೀಮಯ್ಯನ ಕುರುಡು ಫಸ್ಟ್ ನೈಟಲ್ಲಿ ನೋಡು ಅಂದರಂತೆ ಯಾರೋ ಹಂಗಾಯ್ತು ನನ್ನ ಬಾಳು

2 comments:

  1. ಹುಡುಗ ಒಳ್ಳೆಯವನೇ, ಆದರೆ ಮನೆಗೆ ಮಾತ್ರ ಸೇರಿಸಬ್ಯಾಡಿ ಅಂದಂಗಾತು.  :-D

    ReplyDelete
  2. ಇರಳುಗಣ್ಣು ಮನೆಗೆ ಸೇರಿಸಿದರೂ ಏನೂ ಮಾಡನು ರಾತ್ರಿ ಹೊತ್ತು ಮಾತ್ರ ಬದರಿಜಿ.

    ReplyDelete