Monday, January 6, 2014

" ಆಹಾ ನನ್ನ ಮದುವೆ "

ನನಗೇನೋ
ನಿಮ್ಮ ಮಗಳು ಒಪ್ಪಿಗೆ,
ವರದಕ್ಷಿಣೆ, ವರೋಪಚಾರ
ಆಡಂಬರ ನನಗೊಂದು ಬೇಡ
ಸಿಂಪಲ್ಲಾಗಿ ಗುರು ಹಿರಿಯರ ಸಮ್ಮುಖದಲ್ಲಿ
ಮದುವೆಯ ಮಾಡಿಕೊಟ್ಟರೆ ಸಾಕು;
ನನ್ನ ಬಗ್ಗೆ ಅನುಮಾನ ಬೇಡವೇ ಬೇಡ ನಿಮಗೆ
ವರದಕ್ಷಿಣೆ, ವರೋಪಚಾರ ಕೇಳದ
ವರ ಈ ಜಗದೊಳಗೆ ಉಂಟೇ ಎಂದು
ನನಗ್ಯಾವ ರೋಗ- ರುಜಿನವೂ ಇಲ್ಲ,
ಯಾವುದೇ ಮರೆಮಾಚುವ ಐಬೂ ಇಲ್ಲ
ಹೆಂಡತಿಯ ದುಡಿದು ಸಾಕಲಾರದವ
ಸ್ವಂತಿಕೆಯ ವ್ಯಕ್ತಿತ್ವ ಇಲ್ಲದವ
ಇದೆಲ್ಲವ ಕೇಳುವುದು, ಬೇಡುವುದು
ಸ್ವಂತ ಮನೆ, ಸಾಕಷ್ಟೂ ಆಸ್ತಿ ಪಾಸ್ತಿ;
ಕೈ ತುಂಬಾ ಸಂಪಾದನೆ ಇರುವಾಗ
ಬೇರೆಯವರಲ್ಲಿ ನಾ ಕೇಳಿ ಬಾಳಬೇಕೆ ?

2 comments:

  1. ಕನ್ಯಾ ಪಿತೃವನ್ನು ಸುಲಿಗೆ ಮಾಡಲೇ ಹುಟ್ಟಿರುವಂತಹ ವರರ ನಡುವೆ ನೀವು ಮಹಾನುಭಾವರು.

    ReplyDelete
  2. ಸಾಲ ಸೋಲ ಮಾಡಿ, ಮಗಳ ಮದುವೆಯ ಮಾಡಿ ಕನ್ಯಾಪಿತೃಗಳ ಕಣ್ಣೀರ ನೋಡಲಾಗದು, ಮಾವ ಕೊಟ್ಟಿದ್ದು ಮನೆ ತನಕ ದೇವರು ಕೊಡುವುದು ಕೊನೆ ತನಕ ಎಂಬುದ ಎಲ್ಲರೂ ಅರಿತರೆ ಎಷ್ಟು ಚೆನ್ನ ಅಲ್ಲವೆ ಬದರಿಜಿ.

    ReplyDelete