Sunday, July 27, 2014

" ಪೂಜೆ " ಭಾಗ - 2

ನಿನ್ನದು ಒಳ್ಳೆ ಫಜೀತಿಯ ಕಾಟವಾಯ್ತಲ್ಲೆ  
ಸ್ವಲ್ಪ ತಡಿಯೇ... ಮಾರಾಯ್ತಿ ಗಡಿಬಿಡಿ ಏಕೆ?
ಸೆಕೆಂಡ್ ಯೂನಿಟ್ಟಲ್ಲೇನೋ...... ಸಮಸ್ಯೆಯಂತೆ
ಹೀಗೆ ಹೋಗಿ ಮಧ್ಯಾಹ್ನಕ್ಕೆಲ್ಲ ನಾ ಬಂದು ಬಿಡುವೆ
ಈ ಪೂಜೆ, ಪುನಸ್ಕಾರ ಭೀಮನ ಅಮಾವಾಸ್ಯೆಯ ವ್ರತ
ನಾ ಬಂದ ಮೇಲೆ ರಾತ್ರಿಯೆಲ್ಲಾ ಮಾಡುವೆಯಂತೆ;
ಮಧ್ಯೆ ಮಧ್ಯೆ ನನಗೆ ಫೋನ್ ಮಾಡದಿರು ಅರ್ಥವಾಯ್ತೇ ಅಲ್ಲೇನಾಗಿದೆಯೋ...... ಮೊದಲು ನೋಡಿ ಬನ್ನಿ
ಎಲ್ಲಾ.... ನನ್ನ ಕರ್ಮ ಕರ್ಮ, ದೇವರೇ ದೇವರೆ
ಸಂಜೆಗೆ ಪೂಜೆ ಮಾಡಿದರಾಯ್ತು
ಇಲ್ಲಿಂದ ಬೇಗ ಮೊದಲು ಹೊರಡಿ.....
ಇವಳಿಗಾದರು ಹೇಗೆ ತಾನೆ ತಿಳಿದೀತು
ನನ್ನ secod setup ಇರುವ ವಿಚಾರ
ಗೊತ್ತಾದರೆ ನನ್ನ ಸುಮ್ಮನೆ ಬಿಟ್ಟಾಳೆಯೇ ...!!
ಲಟ್ಟಣಿಗೆಯ ಹಿಡಿದು ಊರ ತುಂಬ ಅಟ್ಟಾಡಿಸದಿರಳು

ರ್ರೀ.... ಬೇಗ ಬರುವಿರೋ... ಇಲ್ಲವೋ....
ನನಗೂ... ಕಾದು ಕಾದು ಸಾಕಾಯ್ತು
ಬರದಿದ್ದರೆ ಗೊತ್ತಲ್ಲ ಅಲ್ಲಿಗೆ ನಾನೇ ಬಂದು
ಮಂಗಳಾರತಿ ಎತ್ತಿ ಪೂಜೆ ಮಾಡಬೇಕಾದೀತು
ಈ ನನ್ನ ಮುಸುಡಿಗೆ ಇಬ್ಬರೆಂಡಿರು ಬೇಕಿತ್ತೆ ಸ್ವಾಮಿ
ಕಷ್ಟ ಸುಖಗಳ ಉಗುಳುವಂತಿಲ್ಲ, ನುಂಗುವಂತಿಲ್ಲ

ನನ್ನ ಪುಣ್ಯಕ್ಕೆ ಅಂತೂ... ಬೇಗ ಬಂದಿರಲ್ಲ
ಸ್ನಾನ ಮುಗಿಸಿ ಈ ಲಂಗೋಟಿ ಕಟ್ಟಿ;
ಬೇವಿನ ಸೊಪ್ಪ ಸೊಂಟದ ಸುತ್ತ ಕಟ್ಟಿ
ಏನೂ ಮಾತಾಡದೆ ಕಣ್ಮುಚ್ಚಿ ನೇರ ನಿಲ್ಲಿ
ಸಾಧ್ಯವಿಲ್ಲವೇ.... ನನ್ನ ನೀ ಏನೆಂದು ತಿಳಿದಿರುವೆ
ನೀ ಕುಣಿಸಿದಂತೆ ಕುಣಿಯುವ ಆ ದೊಂಬರಾಟದ
ಮಂಗನೆಂದು ಕೊಂಡೆಯೋ.... ಹೇಗೆ !!
ಮೊದಲು ನಾ ಹೇಳಿದಂತೆ ಕೇಳಿ ಇಲ್ಲವಾದರೆ ಗೊತ್ತಲ್ಲ ನನ್ನನ್ನೇನು ಹೆದರು ಪುಕ್ಕಲ ಎಂದು ಕೊಂಡೆಯೋ...
ನಿನ್ನ ಹೆದರಿಕೆಗೆ, ಬೆದರಿಕೆಗೆ ನಾ ಬಗ್ಗಲ್ವೇ....
ಆಗಾದರೆ ಸರಿ ಬಿಡಿ ಆ ಮನೆಗೆ ಬಂದು
ಅಲ್ಲಿಯೇ... ಇಬ್ಬರೂ " ಪೂಜೆ " ಮಾಡುವಿರಿ ಮಾಡಿಸಿಕೊಳ್ಳುವರಂತೆ " ಮಹಾಪೂಜೆ " ಎನ್ನಬೇಕೆ...!!

1 comment:

  1. ಮಹಾಸ್ವಾಮಿ, ತಮ್ಮ ಅಸಲಿ ಮತ್ತು ಸೆಕೆಂಡ್ ಯೂನಿಟ್ ಅವರುಗಳಿಗೆ ಮೂರನೇ ಯೂನಿಟ್ ಬಗ್ಗೆ ಗೊತ್ತಾದ್ರೇ ಏನು ಗತಿರೀ?

    ReplyDelete