Friday, July 4, 2014

" ಮಟನ್ ಗುನ್ಯ "

ಎರಡು ಮೂರು ದಿನದಿಂದ ಮೈಸರಿಯಿರದೆ
ಮೈ, ಕೈಕಾಲು ನೋವು ನೋವು
ಚಳಿ ಜ್ವರಕ್ಕೆ ನಾನೀಗ ಮನೆಯಲ್ಲಿಯೇ ...
ಆಸ್ಪತ್ರೆಗೆ ಹೋಗಿ, ದುಡ್ಡು ಸುರಿದು ಬಂದಾಯ್ತು
ಆತ್ಮೀಯ ಮಿತ್ರರೆಲ್ಲರ ಶುಭ ಹಾರೈಕೆ
ಬೇಗ ಗುಣ ಮುಖರಾಗಿ, fbಗೆ ಹಾಜರಾತಿ ಹಾಕಿ ಒಬ್ಬೊಬ್ಬರದ್ದೂ.... ಒಂದೊಂದು ಸಲಹೆ, ಓಲೈಕೆ
ಏನು ಚಳಿ ಜ್ವರವೆ, ಈ ಕ್ಲೈಮೇಟೇ ಹಾಗೆ ಸ್ವಾಮಿ
ಮೊನ್ನೆ ಬಿದ್ದ ಮಳೆಗೆ ಎಲ್ಲೋ.... ನೆನೆದಿರಬೇಕು
ಆಗಲೇ .... ಒಂದು ನೈಂಟಿ ಹೊಡೆದಿದ್ದರೆ
ಈ ಕೆಮ್ಮು ದಮ್ಮು ,ಶೀತ ಗೀತ ಬರುತ್ತಿರಲಿಲ್ಲ ನೋಡಿ
ಹೋಗಲಿ ಡಾಕ್ಟರ್ ಬಳಿ ಹೋಗಿದ್ದಿರೋ... ಇಲ್ಲವೋ?
ಏನಂದರು ಚಿಕನ್ ಗುನ್ಯ, ಹೆಚ್1 ಎನ್1, ಮಲೇರಿಯ ಅದ್ಯಾವುದೋ .... ಹೊಸ ರೋಗವಂತೆ
ಬೆಂಗಳೂರಿನ ತುಂಬೆಲ್ಲಾ.... ಅದೇ ಸುದ್ದಿಯಂತೆ
ನನ್ನ ತಲೆಯೊಳಗೆ ಅನುಮಾನದ ಹುಳ ಬಿಟ್ಟು
ಯೋಚಿಸುವಂತೆ ಮಾಡಿ,
ಡಾಕ್ಟರ್ ಹೇಳಲಿಲ್ಲವೆ ನಿಮಗೆ? ಸರಿ ಹೋಯ್ತು ಬಿಡಿ
ನಾನೇ... ಗಾಭರಿಯಿಂದ ಯಾವ ರೋಗವಂತೆ
ಬೇಗ ಹೇಳಬಾರದೇ... " ಮಟನ್ ಗುನ್ಯ " ಎನ್ನಬೇಕೆ
ಆ ಸುಸ್ತಲ್ಲೂ.... ನಕ್ಕಿದ್ದೇ... ನಕ್ಕಿದ್ದು

2 comments:

  1. ಮಟನ್ ರೇಟಿಗೇ ನಾನ್ ವೆಜ್ಜಿಗರು ಬೆವರುತಿಹರು! ಬಹುಶಃ ಇದೂ ಇದೇ ಖಾಯಿಲೆಯ ಲಕ್ಷಣವೇನೋ!

    ReplyDelete
  2. ನಾ ನಿಮಗೊಂದು ವಿಷಯ ತಿಳಿಸಲೇಬೇಕು ಮಟನ್ , ಚಿಕನ್ ರೇಟು ಏನೇ... ಇರಲಿ; ಚಿಕನ್ ಗುನ್ಯ, ಹೆಚ್1 ಎನ್1, ಮಲೇರಿಯಾಕ್ಕಿಂತ ಲಟ್ಟಣಿಗೆಯ ಗುನ್ನ ಬಲು ಡೇಂಜರ್....!!
    ಯಾವುದಕ್ಕೂ ಎಚ್ಚರವಿರಲಿ. 😀

    ReplyDelete