Monday, August 18, 2014

" ನಾ ಬಂಜೆಯೇ ".....?

ಮನತಣಿಸುವಂಥ ಮಳೆ ಬೀಳಲಿಲ್ಲ
ಚಿಗುರೊಡೆದು ಬೆಳೆಯ ಕಾಣಲಿಲ್ಲ
ಕರೆದರು ನನ್ನ ಬಂಜೆ ಎಂದು
ಒಡಲ ಕುಡಿಯ ಕಾಣಲು,
ತೊದಲ ನುಡಿಯ ಕೇಳಲು
ಹೆಣ್ಣ ಸಹಜ ಬಯಕೆ ಗರಿಯ ಬಿಚ್ಚಿ;
ಹಾರದಾಯ್ತು ದೂರಕೆ
ಒಂಟಿಯಾಗಿ ಸುಡುವ ಬೆಂಕಿಗೆ
ಮೈಯ ಒಡ್ಡಿ ನಡುಗೊ ಚಳಿಗೆ
ಹೊರಳಿ, ಉರುಳಿ, ನರಳಿ ನರಳಿ
ಕೆರಳಿ ಕೆಂಡವಾಗಿ ಹೋದೆನು
ಬಾಡಲಿಲ್ಲ ಮುಡಿದ ಹೂವಮಾಲೆ
ನಡೆಯಲಿಲ್ಲ ಕಾಣದ ರಾಸಲೀಲೆ
ಷಂಡನೆಂಬ ಕಾಮನು
ಗಂಡನಾಗಿ ನನ್ನನು
ತಣಿಸಲಿಕ್ಕೆ ಏಳಲಿಲ್ಲ,
ಹಿಂಡಿ ಹಿಪ್ಪೆ ಮಾಡಲಿಲ್ಲ
ಬಂಜೆಯಾಗಿ ಉಳಿದೆನು ಬಂಜೆಯಾಗಿ ....  


1 comment:

  1. ’ಷಂಡನೆಂಬ ಕಾಮನು
    ಗಂಡನಾಗಿ ನನ್ನನು
    ತಣಿಸಲಿಕ್ಕೆ’
    ಹಲವು ಮನೆಗಳ ಒಳ ಅಳಲಿದು...

    ReplyDelete