Monday, August 11, 2014

" ಆಶೀರ್ವಾದ "

ನನ್ನವಳು ಅಕ್ಷತೆಯ ಕೈಯಲ್ಲಿಟ್ಟು
ಮುತ್ತೈದೆ ಭಾಗ್ಯ ಗಟ್ಟಿಯಾಗಿರಲೆಂದು
ಮನಸಾರೆ ನನ್ನ ಹರಸಿ, ಆಶೀರ್ವದಿಸಿ
ಏಳೇಳು ಜನ್ಮದಿ ನೀವೇ ನನ್ನ ಪತಿ;
ಈ ಜನ್ಮಕ್ಕೆ ನನಗಿಷ್ಟು ಸಾಕೇ
ನೀ ಹೇಳಿದ್ದಕ್ಕೆಲ್ಲ ಹ್ಞೂಂ ಗುಟ್ಟಿ,
ನೀ ಕೇಳಿದ್ದೆಲ್ಲ ಮಾಡುವ ಕೆಲಸದವ
ನಾ ಧಮ್ ಇಲ್ಲದಿರೊ ನಿನ್ನ ಪತಿಯಷ್ಟೆ
ಹೌದೌದೆನ್ನುವ ನನ್ನಂಥಹ ಗಂಡಸರಿಗೆ
ಸೀರೆ, ಬಳೆಗಳು, ಕಾಲುಂಗುರ ಇಲ್ಲವಷ್ಟೆ
ಸುಮ್ಮನೆ ಈ ಅಕ್ಷತೆ, ತಾಳಿಯಲ್ಲ ನಿನಗೇಕೆ ?
ನೀ ಬಗ್ಗಿ ನಮಸ್ಕರಿಸುವುದು ಬೇಡ
ನಿನ್ನ ನಟನೆ, ದಬ್ಬಾಳಿಕೆ ನನಗೂ ಸಾಕಾಗಿದೆ
ಏನೇ.... ಏಳುಬೀಳುಗಳು ಬಂದಿದ್ದರೂ
ಎದೆಗುಂದದೆ ಹೆದರಿಸಿ ನಿನ್ನ ಜೊತೆ ಜೊತೆಯಲ್ಲಿ
ಇಷ್ಟು ವರ್ಷಗಳು ಹೆಜ್ಜೆ ಹಾಕಿ ಬಾಳಿದ್ದು ಸಾಕು
ನಿನ್ನ ದಾರಿ ನಿನಗೆ, ನನ್ನ ಬದುಕು ಇನ್ನೆಲ್ಲಿಗೋ
ನೀ ಹೀಗೆ ಗೊಂಬೆಯಂತೆ ನಿಂತಲ್ಲಿಯೇ ನಿಂತಿರು
ಯಾರಿಗೆ ಬೇಕಾಗಿದೆ ಈ ಸಂಸಾರ ತಾಪತ್ರಯ 
ನಗೆ ಮುಖವಾಡದ ದೊಂಬರಾಟದ ಬದುಕು
ರೀ.....ಹರಸಿ ಬಿಡ್ರೀ ನನಗೂ ಶ್ರೇಯಸ್ಸು
ನಿಮಗೂ ಯಶಸ್ಸು ನಿಮ್ಮ ದಮ್ಮಯ್ಯಾ...
ಬೆಳಗೆದ್ದು ಜಾಗಿಂಗ್ಗೆ ಬರುವೆ
ಇನ್ನಿರದು ಈ ದಡೂತಿ ದೇಹ ...    

2 comments:

  1. ಜಾಗಿಂಗೆ ಬರ್ತಾರಂತೆ, ಸಿದ್ಧವಾಗಿರಿ MTR ಮಸಾಲೆ ದೋಸೆ ಮತ್ತು ಕಾಫಿಗೆ. ಆ ಮೇಲೆ ಸ್ಲಿಮ್ಮಿಂಗ್ ಕಾರ್ಯಚರಣೆ!

    ReplyDelete
    Replies
    1. ಮುಗಿಯಿತು ನನ್ನ ಕಥೆ, MTR ಮಸಾಲೆ ದೋಸೆ, ಕಾಫಿಯ ರುಚಿಗೆ ಮತ್ತಷ್ಟು ಒಂದು ಸುತ್ತು ದಪ್ಪಗಾಗುವವಳು ಬದರಿ ಸರ್.

      Delete