Wednesday, July 10, 2013

ಜಾತಿ ಭಯ

ನೀ ನನ್ನ ಮರೆತು ಬಿಡು
ಹಾಳಾದ್ದು, ಈ ಜಾತಿಯ
ವ್ಯವಸ್ಥೆ, ನಮ್ಮಿಬ್ಬರನ್ನು
ಎಂದೂ, ಒಂದು ಮಾಡದು;
ಈ ವಿಷವರ್ತುಲದಲ್ಲಿ ಸಿಲುಕಿ
ಹೀಗೆ, ನರಳಿ ಕೊರಗಿ ದಿನಾ
ಸಾಯುವುದಕ್ಕಿಂತ ನಾವು
ಎಲ್ಲಾದರೂ, ಹೇಗಾದರೂ
ದೂರದೂರವಾಗಿ, ನೋಡದೆ
ಬೇರೆಬೇರೆಯಾಗಿ ಬಾಳುವುದೇ
ಈಗ ಉಳಿದಿರುವುದೋಂದೇ ದಾರಿ !

ನೀ ನನ್ನ ಕೇಳಬಹುದು
ನೋಡುವಾಗ ಇಲ್ಲದ ಜಾತಿ
ಪ್ರೇಮಿಸುವಾಗ ಇಲ್ಲದ ಜಾತಿ,
ಒಂದೇ ತಟ್ಟೆಯಲ್ಲುಂಡು ಮಲಗಿ;
ಮುದ್ದಾಡುವಾಗ ಇಲ್ಲದ ಈ ಜಾತಿ
ಈಗೆಲ್ಲಿಂದ, ಧುತ್ತನೆ ಬಳಿ ಬಂತೆಂದು,
ಈ ನಿನ್ನ ಎಲ್ಲಾ ಪ್ರಶ್ನೆಗಳ ಕೇಳಿ
ಅರಗಿಸಿ ಕೊಳ್ಳಲು ನನಗೂ ಕಷ್ಟವೆ;
ನಿನ್ನ ಒಂದೊಂದು ಮಾತಿನ ಬಾಣ
ನನ್ನೆದೆಯ ಘಾಸೀಗೊಳಿಸಿದರೂ ನಾ
ಅಸಹಾಯಕ, ಏನನ್ನೂ ಹೇಳಲಾರೆ !

ಎಲ್ಲಾದರೂ, ಹೇಗಾದರೂ
ಓಡಿ ಹೋಗಿ, ಈಗಲೇ
ಮದುವೆಯಾಗೋಣ
ಎಂದರೆ, ದಶದಿಕ್ಕುಗಳಿಗೂ
ನಿಮ್ಮವರ ಕಣ್ಗಾವಲಿನ ಸೈನ್ಯ;
ಎಲ್ಲಿ ನಮ್ಮ ಮನೆಯವರ ಕೊಲ್ಲುವರೋ
ನನ್ನ ತಂಗಿಯರಿಗೇನು ಮಾಡುವರೋ,
ಎಂಬ, ಎಲ್ಲಿಲ್ಲದ ಹಪತಪಿಸುವ ಭಯ
ಮರ್ಯಾದೆಯ ಹೆಸರಲ್ಲಿ ನಿನ್ನ ಹತ್ಯೆಯ
ಗೈದರೆ, ನಾ ನಿನ್ನ ಬಿಟ್ಟು ಬದುಕುವನೇ !

2 comments:

  1. ತುಂಬಾ ಮಾರ್ಮಿಕವಾದ ಕವನ. ಕಾಲ ಬದಲಾದರು ವ್ಯವಸ್ಥೆ ತಿದ್ದಲೇ ಇಲ್ಲ. ಅದೇ ನಮ್ಮ ದುರ್ವಿಧಿ.

    ReplyDelete
  2. ಧನ್ಯವಾದಗಳು Badarinath Palvalli ಸರ್, ನಿಮ್ಮೆಲ್ಲರ ಹಾರೈಕೆ, ಸಮಯೋಚಿತ ತಿದ್ದುವಿಕೆ ಪ್ರೋತ್ಸಾಹಗಳೇ ನನ್ನ ಬದುಕು ಬರವಣಿಗೆಗೆ ಸಹಕಾರಿ.

    ReplyDelete