Saturday, July 27, 2013

ಜಾತಿಯೆಂಬ ಭೂತ

ಎಲ್ಲಾ ಕೇಳುವವರೆ ನನ್ನ
ನಿನ್ನ ಜಾತಿ ಯಾವುದು
ಧರ್ಮ ಯಾವುದೆಂದು
ಅಪ್ಪ ವ್ಯಾಪರದಲ್ಲಿ ವೈಶ್ಯ
ಅಮ್ಮ ಅವರಿವ
ಬಂದವರ ಕೇಶವ ಕತ್ತರಿಸಿ
ಶೃಂಗರಿಸುವ ಕಲಾನಿಪುಣೆ;
ಇನ್ನು ಅಜ್ಜ ಮುತ್ತಜ್ಜರು
ಪರಂಪರಾಗತವಾಗಿ
ಬಳುವಳಿಯಾಗಿ ಬಂದ
ಪೂಜಾ ಕೈಂಕರ್ಯ,
ವೇದ ಉಪನಿಷತ್ತು ಬಲ್ಲ
ಪಂಡಿತೋತ್ತಮರು
ಇಂತಹವರ ಕುಲದಲ್ಲಿ ಹುಟ್ಟಿ
ಇದೆಂತಹ ವೃತ್ತಿ - ಪ್ರವೃತ್ತಿ
ಹಾಸ್ಯಕ್ಕೋ ಅಪಹಾಸ್ಯಕ್ಕೋ
ನಮ್ಮವರೇ ನಮ್ಮ
ಆಡಿಕೊಂಡು ನಗುವಾಗ,
ಛೇಡಿಸುವಾಗ ಕೇಳುವಾಗಲೆಲ್ಲಾ
ನಾನೇ ನಕ್ಕು ಸುಮ್ಮನಾಗುತ್ತಿದ್ದೆ ॥

ವ್ಯಾಪರಂ ದ್ರೋಹ ಚಿಂತನಂ
ಇದು ಬೇಕಿತ್ತೇ, ಹಾಯಾಗಿ
ದೇವರ ಸಾನಿಧ್ಯದಲ್ಲಿ
ಪೂಜೆ ಪುನಸ್ಕಾರ ಎಂದು;
ಪೂಜೆಯ ಮಾಡಿಕೊಂಡಿರದೆ
ವ್ಯಾಪಾರಸ್ತನಂತೆ ಇವನಪ್ಪ
ಇನ್ನು ಇವನ ಅಮ್ಮ
ಮಡಿ ಮೈಲಿಗೆ  ಎನ್ನದೆ
ಜಾತಿ ಕುಲವೆನ್ನದೆ
ಬಂದ ಕಂಡ ಕಂಡ ಹೆಣ್ಣುಗಳ
ಮುಖ ಮರ್ಧನ, ಕೇಶ ಶೃಂಗಾರ ಮಾಡಿ
ಹಣ ಸಂಪಾದನೆಯಿಂದ ಜೀವಿಸುವುದೆ
ಛೇ ಛೇ ಎಲ್ಲಾದರೂ  ಅಗ್ರಹಾರದೊಳಗೆ
ಸೇರಿಸಿ ಕೊಂಡೀರಿ ಜಾತಿ ಭ್ರಷ್ಟ ಮುಂಡೇವನ್ನ

2 comments:

  1. ಚಿಂತನಾರ್ಹ ಕವನ. :)

    ReplyDelete
    Replies
    1. ಈ ಕವನವ ಬರೆಯಲು ಪ್ರೇರಣೆ ನೀಡಿದ ಸನ್ಮಾನ್ಯ ಶ್ರೀ ನಟರತ್ನಾಕರ ಮಾಸ್ಟರ್ ಹಿರಣ್ಣಯ್ಯರವರ ನಾ ನೆನೆಯಲೇ ಬೇಕು.ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಕಗ್ಗರಸಧಾರೆಯ ಪುಸ್ತಕ ಲೋಕಾರ್ಪಣೆಗೊಂಡ ಸಂದರ್ಭದಲ್ಲಿ ಅವರ ಭಾಷಣದಿಂದ ಸ್ಪೂರ್ತಿಗೊಂಡು ಬರೆದದ್ದು.

      Delete