Thursday, November 7, 2013

ಅಕ್ಕಾ ನಿನ್ ಮಗಳು ನಂಗೆ ಚಿಕ್ಕೊಳಾಗಲ್ವಾ !

ಮುದ್ದಿನ ಮೊಮ್ಮಗಳೆಂದರೆ ಸಾಕು
ಈ ನನ್ನ ಅಪ್ಪಾ ಅಮ್ಮನಿಗೆ ಏಕೋ
ಎಲ್ಲಿಲ್ಲದ ಮಮಕಾರ, ಅಕ್ಕರಾವಸ್ಥೆ
ನನಗಿಂತ ಏಳೆಂಟು ವರ್ಷ ಚಿಕ್ಕವಳು
ಬೇರೆ ಕಡೆ ಒಳ್ಳೆಯ ಹುಡುಗನ ಹುಡುಕಿ
ಮದುವೆಯ ಮಾಡಿ ಕೊಟ್ಟರಾಯಿತು
ನನಗಂತೂ ಈ ಸಂಬಂಧದಲ್ಲಿ ಬೇಡ ! 

ಅಮ್ಮಾ, ಅಕ್ಕ ಬಿಡದೆ ಅತ್ತೂ ಕರೆದು
ಮೂರು ದಿನ ಊಟ ಮಾಡದೆ ಒಪ್ಪಿಸಿ
ನನಗಿವಳ ಗಂಟಾಕಿ ತಪ್ಪು ಮಾಡಿದ್ದರು
ಇಂದು ಹೇಳಿದಕ್ಕೆ ಕೇಳಿದಕ್ಕೆಲ್ಲಾ ಹಲ್ಕಚ್ಚಿ
ಇವಳ ತಾಳಕ್ಕೆ ನಾ ಕುಣಿಯುವಂತಾಗಿದೆ !

ನಾ ಇವಳ ಮದುವೆಯಾದ ಹೊಸತರಲ್ಲಿ
ಮೊದ ಮೊದಲು ಎಲ್ಲವೂ ಚೆನ್ನಾಗಿತ್ತು
ನಗರದಲ್ಲಿ ಕೆಲಸ, ಹೊಸ ಬಾಡಿಗೆ ಮನೆ
ಸಮಯಕ್ಕೆ ಸರಿಯಾಗಿ ಅಮ್ಮನ ಕೈಯಡುಗೆ
ಬೆಚ್ಚಗೆ ತಿಂದುಂಡು ಸ್ವರ್ಗಕ್ಕೆ ಕಿಚ್ಚು ಹಚ್ಚಿದ್ದೆವು !

ನಮಗೂ ಮತ್ತಷ್ಟು ಏಕಾಂತ ಬೇಕಿತ್ತೆನ್ನಿ
ಎಲ್ಲದಕ್ಕೂ ಅಜ್ಜಿಯ ಸೀರೆಯ ಸೆರೆಗಿಡಿದು
ಸುತ್ತುವವಳ ನಾ ಹಿಂಬಾಲಿಸಲಾದೀತೆ
ನನ್ನ ಮನದ ಸೂಕ್ಷ್ಮ ಅರಿತರೇನೋ ಅಮ್ಮ
ನಿಮ್ಮಿಬ್ಬರ ಮಧ್ಯೆ ನಾವೇಕೋ ಮನೋಹರ
ನಾಳೆಯೇ ನಮ್ಮನ್ನು ಊರಿಗೆ ಬಸ್ ಹತ್ತಿಸು !

ಮನು, ಅವಳು ನಿನಗಿಂತ ಚಿಕ್ಕವಳು
ಏನೂ ತಿಳಿಯದ ಮಗ್ಧ ಹಳ್ಳೀ ಹುಡುಗಿ
ನೀನೇ ಅನುಸರಿಸಿ ಕೊಂಡು ಹೋಗು
ಇದೇನು ಕಲಿಯಲಾಗದ ಬ್ರಹ್ಮ ವಿಧ್ಯೆಯೆ
ಮುಂದೆ ಒಂದೊಂದೇ ಎಲ್ಲಾ ಕಲಿತಾಳು
ಅಪ್ಪಾ ಅಮ್ಮನಿಂದ ಬಿಟ್ಟಿ ಸಲಹೆ ಬೇರೆ

ಅಲ್ಲಾ..... ನಾನಿವಳ ಬೈಯುವಂತಿಲ್ಲ
ಏನೂ ಹೇಳುವಂತಿಲ್ಲ ರೇಗುವಂತಿಲ್ಲ
ಹೇಗಿದೆ ನೋಡಿ ಮೊಮ್ಮಗಳಿಗೆ ಬೆಂಬಲ
ನಿನ್ನ ಮೊಮ್ಮಗಳಿಗೆ ನೆಟ್ಟಗೆ ಒಂದೊಪ್ಪತ್ತು
ಒಂದು ಅನ್ನ ಸಾರು ಪಲ್ಯ ಮಾಡಲು ಬರದು
ಹೀಗೇ ಮುಂದುವರೆದರೆ ಸಂಸಾರ ಮಾಡಿದಂತೆ
ನನಗೂ ಹೋಟೆಲ್ ಊಟ ತಿಂದು ಸಾಕಾಗಿದೆ ಯಾರಾದರೊಬ್ಬರು ಊರಿಂದ ಬನ್ನಿ ಅಡುಗೆಕಲಿಸಿ !

2 comments:

  1. ರುಚಿಯಲೂ ಅಕಟಕಟಾ... ಅನುಸರಿಸಿ ಕೊಂಡು ಹೋಗುವುದು ಅನಿವಾರ್ಯ ಕರ್ಮ ಎನಗೆ!

    ReplyDelete
  2. ಒಂದೆರಡು ದಿನವೇನು ವಾರ ಕಳೆದರು, ರುಚಿಯಿಲ್ಲ ಬೆಂದೇ ಇರದು; ಹೇಗೆ ತಾನೆ ಪಚನವಾದೀತು. ಹಸಿದ ಹೊಟ್ಟೆಗೆ ಸಂಕಟ ನಿತ್ಯ ಜಗಳ.

    ReplyDelete