Friday, November 22, 2013

ಪ್ರೀತಿಯ ತಂಗಾಳಿ

ನೀ ಎಲ್ಲೋ
ಬರುತಿರುವ ಮೊದಲೇ
ನನ್ನೆದೆಯು
ಕೂಗಿ ಕೂಗಿ ಹೇಳುತಿದೆ
ಏಕೋ ಏನೋ ನನ್ನೊಳಗೆ
ಹೇಳದೆ ಕೇಳದೆ ಹಾಗೆಯೇ
ನೀ ಬಂದಿಣುಕುವ
ನಿನ್ನಯ ಬಳುಕುವ
ಗೆಜ್ಜೆಯ ತಂಗಾಳಿಗೆ
ಈ ಹೃದಯದಿ ನೀ ಬಿಡಿಸಿದೆ
ಬಣ್ಣದ ಚಿತ್ತಾರದ ರಂಗೋಲಿ ॥

ನೀ ಎಲ್ಲೋ
ಅವಿತಿದ್ದರು ಕೂಡಲೇ
ಈ ಮೈ ಮನಸೆಲ್ಲಾ
ನವಿರೇಳುತಿದೆ
ಏಕೋ ಏನೋ ನನ್ನೆದೆಯೊಳಗೆ
ಎಂದೂ ಕಾಣದ ಸೆಳತದ ಪರಿಗೆ
ಬಿಸಿ ನಿಟ್ಟುಸಿರಿನ
ನಿದಿರೆಗೆ ಜಾರಿದ
ಮರು ಘಳಿಗೆಯೇ
ಕನಸಿನ ಕದ ತೆರೆದು
ಪ್ರೀತಿಯ ಬುತ್ತಿಯ ಬಿಚ್ಚಿ
ಕನಸುಗಳ ಗರಿಕೆದರಿಸುತಿದೆ ॥

2 comments:

  1. ನಿಮ್ಮ ನಿಜ ಕವಿತಾ ಪ್ರಭುತ್ವ ಇಲ್ಲಿ ಅರಳಿದೆ. ಭೇಷ್...

    ReplyDelete
  2. ಈ ನಿಮ್ಮ ಪ್ರೋತ್ಸಾಹದ ನುಡಿ ಮಾತುಗಳೇ ನನ್ನ ಪ್ರತಿ ಬರಹಕ್ಕೂ ಸ್ಪೂರ್ತಿ, ಧನ್ಯವಾದಗಳು ಬದರಿನಾಥ ಪಲವಳ್ಳಿ ಸರ್.

    ReplyDelete