Wednesday, November 6, 2013

" ಸಮಯ ಪ್ರಜ್ಞೆ "

ಅಯ್ಯೋ... ನಿಮ್ಮ ಮುಖಾ ಮುಚ್ಚಾ...
ನಾನೇ ಬೇಕಿತ್ತೇನ್ರೋ... ನಿಮಗೆ
ಯಾವೋಳು ಸಿಕ್ಕಲಿಲ್ವೇ ನಿಮ್ಮ ಮುಸುಡಿಗೆ
ಏಯ್ ಬಿಡ್ರೋ... ನನ್ನ ಕೈ ಬಿಡ್ರೋ..
ಬಾಯಿ ಮುಚ್ಚಿದ್ರೆ ಕಚ್ಚಿಬಿಡ್ತೀನಿ ನೋಡ್ರಿ
ಮೊದಲೇ ನೀವು ನನ್ನನ್ನ ಕರೆದಿದ್ದರೆ
ನಾನೇ ನಿಮ್ಮ ಹಿಂದೆ ಕರೆದಲ್ಲಿಗೆ ಬರ್ತಿದ್ದೆ
ಇಷ್ಟೆಲ್ಲಾ ಹೊತ್ಕೊಂಡು ಕಷ್ಟ ಪಡಬೇಕಿತ್ತೆ;

ದುಡ್ಡು ಎಷ್ಟ್ ಇಟ್ಟಿದ್ದೀರ ಸಾವಿರ, ಐನೂರು
ಇಲ್ವಾ.., ನಿಮ್ ಮುಖ ನೋಡಿದ್ರೆ ತಿಳಿಯುತ್ತೆ
ದುಡ್ಡಿಲ್ಲದ ದರಿದ್ರದ ಮುಂಡೇವು ನೀವು ಅಂತ
ಹೋಗ್ಲೀ...., ನಾನೇ ಎಲ್ಲಾ ನಿಮಗೆ ಕೊಡ್ತೀನಿ
ಬಿಟ್ಟಿ ದುಡ್ಡು, ಜೊತೆಗೆ ಏಡ್ಸ್ ರೋಗ ಬನ್ರೋ
ಲೇ ಲಂಬೂ...., ಡುಮ್ಮಾ, ಚೋಟು ಸಣಕಲ
ಯಾರ್ ಮೊದಲು ನನ್ನ ಹತ್ತಿರ ಬರ್ತೀರೋ
ನೀನೋ ಇಲ್ಲಾ, ಅವನೋ ಬೇಗ ಬನ್ರೋ...

ಬಾರೋ ನನ್ನ ಮುದ್ದಿನ ರಾಜಕುಮಾರ
ನನ್ನ ಕೈ ನೀ ಇಡುಕೊಳ್ಳುವಾಗ್ಲೇ ನಿಂಗೆ
ಮೃತ್ಯುವಿನ ಸಿಹಿ ಮುತ್ತು ಕೊಟ್ಟದ್ದೆ
ಕೈಯಿ, ಮೈಯಿ ಹೇಗೆ ಪರ ಪರಾಂತ
ಕೆರಕೊಳ್ಳತ್ತಾವನೆ ನೀವೇ ನೋಡ್ರಿ

ಇನ್ನೊಂದರ್ಧ ಗಂಟೇಲಿ ಸಾಯ್ಬಹುದು
ನೀವು ಸುಖ ಕಾಣಬಹುದು ಬನ್ರೋ.. ಅಣ್ಣಾ
ಏಯ್..... ಏನ್ ಮುಖ ಮುಖ ನೋಡ್ತೀರ
ಯಾಕ್ರೋ ಹೆದರಿ ಬೆದರಿ ಓಡೋಗ್ತೀರ ಬನ್ರೋ.... ಥ್ಯಾಂಕ್ಯೂ ಥ್ಯಾಂಕ್ಯೂ" ಪೆಪ್ಪರ್ ರಿಂಗ್ "

2 comments:

  1. " ಪೆಪ್ಪರ್ ರಿಂಗ್ " ಸಾರ್ಥವಾಯಿತು.
    ಇತ್ತಿತ್ತಲಾಗೆ ಅತ್ಯಾಚಾರಗಳು ಅಹರ್ನಿಶಿ ಆಗ್ಬುಟ್ಟವೆ ಅಲ್ಲವ್ರಾ....

    ReplyDelete
  2. ಹೆಣ್ಣು ತಾನೆಂದೂ ಅಬಲೆಯಲ್ಲ ಸಬಲೆ ಎಂದು ತಿಳಿದು, ಸಮಯ ಸಂದರ್ಭಾನುಸಾರ ಧೈರದಿ ಎದೆಗುಂದದೆ ಹೆದುರಿಸಿ ನಿಂತರೆ ಖಂಡಿತ ಗೆಲುವು ಸಾಧ್ಯ. ಆತ್ಮವಿಶ್ವಾಸ ಮನೋಬಲ ಹೆಚ್ಚೆಚ್ಚು ವೃದ್ಧಿಸಿಕೊಂಡು ಬಾಳಬೇಕಾಗಿದೆ ಬದರಿಜೀ.

    ReplyDelete