Thursday, February 27, 2014

" ಮನೆಗೊಂದು ಹೆಣ್ಣು, ಮಮತೆಯ ಕಣ್ಣು "

ನೀ ಎಡವಿ ಬಿದ್ದಾಗಲೆಲ್ಲಾ
ನಿನ್ನ ತೋಳಿಡಿದು ಮೇಲೆತ್ತಿ
ಮೈದಡವಿ, ಸಂತೈಸುತ
ನಾ ಬೆರಳಿಡಿದು ಅಡಿಗಡಿಗೆ
ನಿನ್ನ ನಡೆಸಿರುವೆ ಮಗಳೇ....

ಆ ನಿನ್ನ ಪುಟ್ಟ ಎಳೆ ಕಾಲ್ಗಳಲಿ
ನನ್ನೆದೆಯನೇರಿ ನೀ ತುಳಿವಾಗ
ಆ ಮೃದು ಸ್ಪರ್ಶಕೆ ನಕ್ಕಿದ್ದೆ ಮಗಳೇ...

ತೊದಲಿ ತೊದಲಿ ನೀ ನುಡಿವಾಗ
ಕನಲಿ ಕನಲಿ ಬೆದರಿ ನೀ ಅಳುವಾಗ
ನನ್ನೆದೆಗೆ ಅಪ್ಪಿ ನಿನ್ನ ಮುದ್ದಾಡಿದ್ದೆ

ನೀ ಬೆಳೆದಂತೆ ನಿನ್ನಲ್ಲಿ ಆ ನನ್ನ ತಾಯ
ಮಮತೆಯ ರೂಪವ ಕಣ್ತುಂಬ ಕಂಡು
ಅವಳಂತೆ ನೀ ನನ್ನ ಗದರಿಸಿ, ಹೆದರಿಸಿ
ಆದರಿಸುವ ಪರಿಗೆ ನಾ ಧನ್ಯ ಮಗಳೆ....

2 comments:

  1. ಅದನ್ನೇ ಹೆಣ್ಮನ ಅನ್ನೋದು ಸಲಹಿದವರನ್ನು ಇನ್ನೂ ಹೆಚ್ಚು ಮುತವರ್ಜಿಯಿಂದ ಸಲಹುವುದು ಆಕೆಯ ಮಹೋನ್ನತ ಗುಣ.

    ReplyDelete
    Replies
    1. ಹೆಣ್ಣೆಂದರೆ ಹಾಗೆಯೇ .... ತಾನೂ ಉರಿದು ತನ್ನ ಸುತ್ತಮುತ್ತಲಿನ ಮಂದಿಗೆಲ್ಲಾ ಬೆಳಕ ನೀಡೋ... ಮೇಣದಂತೆ ಕರಗುವ ಪರಿ ಅಲ್ಲವೆ ಬದರಿ ಸರ್.

      Delete