Wednesday, July 2, 2014

" ಇದೆಲ್ಲಾ .... ನನಗೆ ಬೇಕಿತ್ತೆ ".... ?

ಇನ್ಮುಂದೆ ನಾ ಬರೆಯುವುದ ಬಿಟ್ಟು ಬಿಡಬೇಕೆಂದಿದ್ದೇನೆ
ನನ್ನವಳ ಕಿವಿಯ, ಯಾರು ಕಚ್ಚಿದರೋ.... ಏನೋ ?
ನನ್ನ ಇಡೀ ಜಾತಕವನ್ನೆಲ್ಲಾ... ಜಾಲಾಡಿ
ಇದೆಲ್ಲಾ .... ನಿಮಗೆ ಬೇಕಿತ್ತೇನ್ರೀ.... ?!
ಕಂಡ ಕಂಡವರೆಲ್ಲ ನನ್ನ ಏನೆಂದು ತಿಳಿದಾರು ?
ನೀವು ಬರದದ್ದೆಲ್ಲಾ ಮೆಚ್ಚಿ, ಒಳಗೊಳಗೆ ನಕ್ಕು ;
ಇವನೆಂಥಹ ಕಲಿಯುಗದ ಗಂಡಸು ಛೇ...
ಹೀಗೆ ಹೆಂಡತಿಗೆ ಹೆದರುವುದೇ... ಹೆದರು ಪುಕ್ಕಲ

ಅಯ್ಯೋ ... ಪಾಪ, ಹೀಗಾಗಬಾರದಿತ್ತು
ಎಲ್ಲಾ... ಲೊಚಗುಟ್ಟುವವರೇ.... ಹೆಚ್ಚು
fbಯಲ್ಲಿ ಪೊರಕೆಯಿಡಿದ ನನ್ನ ಫೋಟೋ ಬೇರೆ ?
ಇವಳೆಂಥಹ ಗರತಿ ಗಂಗಮ್ಮನಿರಬೇಕು...
ಹೀಗೆಲ್ಲ ಕೈಹಿಡಿದವನ ಹಿಂಸಿಸುವುದೆ....?
ಮನೆಯಲ್ಲಿ ದಿನನಿತ್ಯ ಎಷ್ಟು ಕಾಟ ಕೊಡುವಳೋ...!! ಶೂರ್ಪಣಿಕಿ, ಡಾಕಿಣಿ ಹೆಣ್ಣು ಕುಲಕ್ಕೇ ಅವಮಾನ
ಫೇಸ್ ಬುಕ್ಕಿನ ಲಲನೆಯರು, ಮಹಿಳಾಮಣಿಗಳು
ನಿಮ್ಮಂತಿರೊ ಆ ಗಂಡಸರು ಶಪಿಸುವರೋ....
ಹೆಸರಿಗೆ ತಕ್ಕಂತೆ ಚೆನ್ನ, ದಿನಾ ಒಂದಿಲ್ಲೊಂದು ರಗಳೆ
ಮನದ ಭಾವನೆಗಳ, ಕಲ್ಪನೆಯ ಕನಸುಗಳ
ನಿಮಗೇಳಿಕೊಳ್ಳಲು fb ಚಾವಡಿಯಷ್ಟೆ;
ಎಂದಾದರು ಕಸ ಗುಡಿಸಿ, ಪಾತ್ರೆ, ಅಡಿಗೆ ಕೊನೆಗೆ
ನನ್ನ ಕಾಲು ಒತ್ತಿ ಎಂದಿರುವೆನೆ....?!
ಏನೋ .... ನಿಮಗಾಗಿ ಕಾದು ಕಾದು ಸುಸ್ತಾಗಿ
ಮನೆಗೆ ಬೇಗ ಬರದಿದ್ದಾಗ ಕೋಪವಷ್ಟೆ...
ಏನೋ ... ಪ್ರೀತಿ ಹೆಚ್ಚಾದಾಗ ಲಟ್ಟಣಿಗೆಯಿಡಿಯುವೆ
ಅದು ಬಿಟ್ಟು ನೀವೇ... ಹೀಗೆ ಸಂಸಾರದ ಗುಟ್ಟು ವ್ಯಾಧಿರಟ್ಟು ಜಗಜ್ಜಾಹೀರು  ಮಾಡುವುದೆ ?
ನನ್ನವಳು ನಕ್ಕು ನಿಮಗೆ ಗೊತ್ತಲ್ಲಾ....
ನಾ " ಒಲಿದರೆ ನಾರಿ, ಮುನಿದರೆ ಮಾರಿ " ಎನ್ನುವುದೆ...!!

2 comments:

  1. ಪತ್ನಿಯ ಸೆರಗನು ಹಿಡಿದು ನಡೆಯುವ ಅಮಿತ ಪ್ರೇಮಿ ನಾನಮ್ಮ
    ಅಂತ ಒಮ್ಮೆ ಹಾಡಿ ನೋಡಿ...

    " ಒಲಿದರೆ ನಾರಿ, ಮುನಿದರೆ ಮಾರಿ " ಅನ್ನು ಮರೆತು
    "ನೀನಿರಲು ಜೊತೆಯಲ್ಲಿ ಬಾಳೆಲ್ಲ ಹಸಿರಾದಂತೆ" ಎಂದು ಹಾಡುವರು ಗ್ಯಾರಂಟಿ...

    ReplyDelete
  2. ಸೀರೆ, ಸೀರೆ ಹೊಸ ಸೀರೆ ತಂದಿರುವೆ ನೀರೆ.... ನಾ ಹಾಡಿದ್ದಕ್ಕೆ ಇಷ್ಟೆಲ್ಲಾ .... ಬರೆದು, ರಂಪಾಟವಾದರೂ... ನಕ್ಕು ನೀವೊ ನಿಮ್ಮ ಹಾಡೋ ಬನ್ನಿ ಒಳಗೆ ಬಿಸಿ ಬಿಸಿ ಚಪ್ಪಾತಿ ಲಟ್ಟಿಸಿರುವೆ ಎನ್ನಬೇಕೆ.!

    ReplyDelete