Sunday, July 13, 2014

" ಕಾವ್ಯಶ್ರೀ "

ನಾ ಕವನ ವಾಚಿಸುವಾಗ,
ಅವಳ ಕಣ್ ಸನ್ನೆಯ ಮಿಂಚಿಗೆ
ಒಂಚೂರು ಓದಲಾಗದೆ ಒದ್ದಾಡಿದ್ದೆ ;
ಅವಳ ಕದಪುಗಳು ಕೆಂಪೇರುವುದ ಕಂಡು
ಕಕ್ಕಾಬಿಕ್ಕಿಯಾಗಿ, ಪದಗಳು ತೊದಲಿ
ಮಾತುಗಳೇ..... ಹೊರ ಬರದೆ ಮುಷ್ಕರ ಹೂಡಿ
ನೆರೆದ ಸಭೀಕರಲ್ಲಿ ಗುಸು ಗುಸು
ವ್ಯವಸ್ಥಾಪಕರ ಕಣ್ ಕೆಂಪಿಗೆ
ಹೆದರಿ ಬಾಯಿಯೆಲ್ಲಾ ಒಣಗಿ
ಒಂದಿಷ್ಟು ಕೆಮ್ಮಿ, ನೀರ್ ಕುಡಿದು
ಮಾತುಗಳೇ... ಹೊರ ಬರದಿದ್ದಾಗ
ಯಾಕಾದರು ಎದಿರು ಕುಳಿತಳೋ.....!!
ಈಗಾಗಲೇ ಬೇಕಿತ್ತೆ ಇವಳ ಒಲವು....
ಮುಖ ಸಪ್ಪಗಾಗಿದ್ದ ಕಂಡು
ಕಣ್ಣಲೇ ... ಹುರುದುಂಬಿಸಿ
ಮೋಹಕ ನಗೆಯ ಬೀರಿದ್ದಳು
ನಿರ್ಗಳವಾಗಿ ಹರಿದ ವಾಗ್ಝರಿಯ ಕಂಡು
ನೆರೆದವರೆಲ್ಲರೂ..... ಒಮ್ಮೆಲೇ ದಂಗು
ತಲೆದೂಗಿ,
ಕರತಾಡನದ ಮಳೆಯ ಜೋರು!!

2 comments:

  1. ಏನ್ ರಸಿಕರಪ್ಪ ನಮ್ಮ ಚೆನ್ನಣ್ಣ.
    ಎಲ್ಲ ಕಡೆ ಮಿಂಚು ಅದು ಹೇಗೆ ಅವರಿಗೇ ಒಲಿದು ಬರುತ್ತೋಪ್ಪಾ! :-D

    ReplyDelete
    Replies
    1. ನಿಮ್ಮಂತಹ ಆತ್ಮೀಯ ಮಿತ್ರರ ಸಹವಾಸದಿಂದ ಪಲವಳ್ಳಿ ಸರ್....

      Delete