Thursday, August 14, 2014

" ಏನಿದೇನು ಗ್ರಹಚಾರವೋ "....!!

ಆ ಹಾ... ಧರೆಗಿಳಿದು ಬಂದ ಮನ್ಮಥ ನೀವು,
ಕನ್ನಡಿಯ ಮುಂದೆ ನಿಂತರೆ ಸಾಕು
ತಾನಾಗಿಯೇ ಕೈ ತಲೆಯ ಮೇಲೆ ಹೋಗುತ್ತೆ
ಹೊತ್ತುಗೊತ್ತಿನ ಪರಿವೆ ಇಲ್ಲದ ನನ್ನ ಗಂಡ
ಆ ಹಾ ನನಗೆ ಹೇಳುವಾಗ ನೋಡಬೇಕು
ಒಂದು ಸೀರೆಯುಡಲು ಗಂಟೆಗಟ್ಟಲೆ ಬೇಕೆನೇ...
ಈಗ ನೋಡಿ... ನಿಮ್ಮ ಪರದಾಟ
ಇರುವ ಒಂದೆರಡು ಕೂದಲುಗಳ
ಅದನ್ನೇನು ಎಳೆದೆಳೆದು ಬಾಚುವಿರೋ...
ಹೊತ್ತಾಯ್ತು ಎದ್ದು ಬನ್ರಿ ಬೇಗ ನಿಮ್ಮ ಬುದ್ಧಿಗೊಂದಿಷ್ಟು ನಿಮ್ಮನ್ನೇನು ಕರೆದು ಯಾರು ತಾಳಿ ಕಟ್ಟಿ ಎನ್ನರು
ನೋಡಿ ಇದೇ... ಮೊದಲು, ಇಂದೇ... ಕೊನೆ
ಕರೆದರೂ ಯಾವುದೇ ಮದುವೆ, ಮುಂಜಿಗೆ
ಜನ್ಮ ದಿನದ ಸಮಾರಂಭಕ್ಕೆ ನಾನಂತೂ ಬರಲಾರೆ
ನನಗೂ... ಸಾಕಾಗಿದೆ ನಿಮ್ಮ ಜೊತೆ ಬಂದು ಬಂದು
ನಮ್ಮಿಬ್ಬರ ನೋಡಿ, ಎಲ್ಲರೂ ನಗುವವರೇ...
ಇವಳೋ... ಉದ್ದ ಜಡೆಯ ಸುಂದರಿ
ಅವನೋ... ತಾಮ್ರದ ತಪ್ಪಲೆಯವ
ಸರಿಯಾಗಿದೆ ಈಡು ಜೋಡು, ಬ್ರಹ್ಮಗಂಟು
ನೋಡಿ ನನ್ನ ಜೊತೆ ಬರದೆ ಮುಂದೆ ಸಾಗಿ
ಇಲ್ಲವಾದರೆ ದೂರದಿಂದಲೇ ಹಿಂಬಾಲಿಸಿ ಬನ್ನಿ
ಗೊತ್ತಾಯ್ತೇ..... ಎನ್ನುವುದೆ ನನ್ನ ಇವಳು!

2 comments:

  1. ಈ ಪೋಸ್ಟ್ ನೇರವಾಗಿ ನನ್ನ ತಲೆಗೇ ಗುರಿ ಇಟ್ಟ ಕಾರಣ, no commentಊ... :(

    ReplyDelete
  2. ಹೆದರದಿರಿ ಬದರಿ ಬಾಯ್ ತಲೆಗೊಪ್ಪುವ ವಿಗ್ಗು ಖರೀದಿಸಿ, ಧರಿಸಿದರೆ ಸಮಸ್ಯೆಯೇ.... ಇರದು. ಹ್ಹಹ್ಹಹ್ಹಹ್ಹಹಾ...

    ReplyDelete