Saturday, July 27, 2013

ಕೃತಘ್ನ ಹೀನ

ನೀ ಕೃತಘ್ನ ಹೀನ
ಪಾಪಿ ನನ್ನ ಗಂಡ,
ನೀ ನನ್ನವನೆಂದು
ಬದುಕಿರಲಿ ಎಂದೆಂದು
ದಾನ ಕೊಟ್ಟೆ ನನ್ನ ಮೂತ್ರಪಿಂಡ
ನೀನು ಬೆರೆಯವಳ ತೆಕ್ಕೆಗೆ ಜಾರಿ
ತಿಳಿ ಹೇಳಿದರೂ ನಾ ಬಾರಿ ಬಾರಿ
ನೀ ಮಾಡಿದ್ದೇನು , ನೀ ಹೇಳಿದ್ದೇನು ?
" ಟಾಟ ನಾನಿನ್ನು ಬರ್ಲಾ "

4 comments:

  1. ಎಂತಹ ಹೃದಯಹೀನ ಗಂಡ!

    ReplyDelete
  2. ಕೆಲವು ತಿಂಗಳುಗಳ ಹಿಂದೆ ವಿಜಯ ಕರ್ನಾಟಕದಲ್ಲಿ ಪ್ರಕಟವಾದ ಮನಕಲಕುವ ವಿಚಾರವಾಗಿತ್ತು. ಹಳ್ಳಿಯ ಹುಡುಗಿಯ ಪ್ರೀತಿಸಿ ಮದುವೆಯಾಗಿ, ಬೆಂಗಳೂರು ನಗರಕ್ಕೆ ಬಂದು ಚೆಂದದ ಸಂಸಾರದಲ್ಲಿ ಬೇರೊಂದು ಹೆಣ್ಣಿನ ಪ್ರವೇಶದಿಂದ ಸಂಸಾರದಲ್ಲಿ ದಿನನಿತ್ಯ ಜಗಳ; ಕುಡಿತಕ್ಕೆ ದಾಸನಾಗಿ ತನ್ನೆರಡೂ ಮೂತ್ರಪಿಂಡಗಳು ವೈಪಲ್ಯದಿಂದ ಸಾಯುವ ಸ್ಥಿತಿಯಲ್ಲಿದ್ದ ತನ್ನವನಿಗೆ ಮೂತ್ರಪಿಂಡ ದಾನಮಾಡಿ ಬದುಕಿಸಿ ಕೊಂಡವಳಿಗೆ ಮತ್ತೇ ಅದೇ ಚಾಳಿಯ ಮುಂದುವರಿಸಿ ಬೇರೆಯಾದ ಶತಮೂರ್ಖ ಕೃತಘ್ನ ಹೀನ ಗಂಡ. ಧನ್ಯವಾದಗಳು ಬದರಿ ಸರ್

    ReplyDelete
  3. ಕೆಲವು ಇಂತಹ ಗಂಡುಗಳಿರುವುದರಿಂದಲೇ ಎಲ್ಲರಿಗೂ ಕೆಟ್ಟ ಹೆಸರು.

    ReplyDelete
    Replies
    1. ನಂಬಿಸಿ ಮೋಸ ಮಾಡುವವರ ಗುಂಡಿಟ್ಟು ಕೊಂದರೂ ತಪ್ಪಿಲ್ಲ,ಸರ್ವಸ್ವವಧಾರೆ ಎರೆದು ಪ್ರೀತಿಸಿದವನ ನಂಬಿ; ಮನೆಯವರನ್ನೆಲ್ಲಾ ತೊರೆದು ಬಂದ ಹೆಣ್ಮಕ್ಕಳ ಇಂತಹ ನೂರಾರು ಕರುಣಾಜನಕ ಕತೆಗಳು ಗೊತ್ತಿದ್ದರೂ ಮೋಸದ ಬಲೆಗೆ ಬೀಳುವವರು ಎಚ್ಚೆತ್ತು ಕೊಳ್ಳಲೇಬೇಕು.ಧನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ Sunil R Agadi.

      Delete