Wednesday, July 24, 2013

ಅಲೆಮಾರಿ

ಹಸಿವಿಗೆ ಅತ್ತತ್ತು
ಸೊರಗಿ ಹಾಗೆಯೇ 
ಕಣ್ಮುಚ್ಚಿ ಮಲಗಿತ್ತು,
ನಾ ಹೊತ್ತೆತ್ತ ಕಂದಮ್ಮ
ಕುಡಿಸಲು ಎದೆಯೊಳಗೆ
ಒಂದಿನಿತು ಹಾಲಿದ್ದರೆ ತಾನೆ;
ಬರಿದಾದ ಬತ್ತಿದ ಮೊಲೆಯ
ಅಗಿದಗಿದು, ಅಳುವ ಉಗಿದು
ಎದೆಯೊಳಗೂ ನೋವು
ನನ್ನೊಡಲೊಳಗೂ ಕಾವು,
ಅರಿಯದ ಊರು
ತಿಳಿಯದ ಭಾಷೆ;
ಎರಡು ದಿನಗಳಿಂದ
ಊಟವಿಲ್ಲದೆ, ನನ್ನವನ
ಕಣ್ಮರೆಯಿಂದ;
ಕಂಗಾಲಾಗಿದ್ದ ನಾನು
ಅವನ ಹುಡುಕುತ್ತಾ
ಊರೂರ ಅಲೆದಿದ್ದೆ !


4 comments:

  1. ಆಕೆಯ ವ್ಯಥೆಭರಿತ ಕಥೆ ಕರುಳು ಹಿಂಡುವಂತಿದೆ.

    ReplyDelete
  2. ಧನ್ಯವಾದಗಳು ಬದರಿನಾಥ ಪಲವಳ್ಳಿ ಸರ್, ಹೊಸ ಬದುಕಿಗಾಗಿ ಅತಿವೃಷ್ಟಿಯಿಂದ ಮನೆ ಮಠ,ಹೊಲಗದ್ದೆ ಜಾನುವಾರಗಳ ಕಳೆದು ಕೊಂಡು ದೂರದ ಊರಿಗೆ ಹೊರಟ ದಂಪತಿಗಳು; ಬೇರೆ ಬೇರೆಯಾಗಿದ್ದು ಇವಳ ದುರದುಷ್ಟವೋ ಹಣೆಯ ಬರಹವೋ ಅಲೆಮಾರಿಯಂತೆ ಅಲೆಯುತ್ತಿರುವಳು.

    ReplyDelete
  3. ಕರಳು ಚುರು ಚುರು ಅನ್ನುವ ಹಾಗಾಯಿತು. :(

    ReplyDelete
  4. ಧನ್ಯವಾದಗಳು Sunil R Agadi, ನಿಮ್ಮೆಲ್ಲರ ತುಂಬು ಹೃದಯದ ಹಾರೈಕೆಗಳಿಗೆ, ಪ್ರೋತ್ಸಾಹಕ್ಕೆ ಸದಾ ಹೀಗೆಯೇ ಇರಲಿ ಅನಿಸಿಕೆ ಟೀಕೆ ಟಿಪ್ಪಣಿಗಳು.

    ReplyDelete