Sunday, August 25, 2013

" ಕಪ್ಪೇ ಚಿಪ್ಪೊಳಗಿನ ಮುತ್ತು "

ನನ್ನಾ ಅವಳ ನಿಶ್ಚಿತಾರ್ಥ,
ಇನ್ನೆರೆಡು ವಾರಗಳಿರುವಾಗ
ನಾನವಳ ಮತ್ತೇ ಕೇಳಿದ್ದೆ;
ನಿನ್ನ ಅಪ್ಪ ಅಮ್ಮರ ಒತ್ತಾಸೆಗೆ
ನೀ ಮನಸ್ಸಿಲ್ಲದೆ ಒಪ್ಪಿದ್ದರೆ,
ಈಗಲೂ ನನ್ನ ಬಲುವಂತವಿಲ್ಲ
ನನ್ನ ಸೋದರತ್ತೆಯ ಮಾತಿಗೆ
ನಾ ಕಟ್ಟು ಬಿದ್ದು ಒಪ್ಪಿದೆನೇ ವಿನಃ
ನಿನ್ನ ಮೇಲಿನ ಮೋಹದಿಂದಲ್ಲ;
ನೀ ಅಂದೇ ಎಲ್ಲರೆದಿರೂ ಹೇಳಿದ್ದೆ
ಓದು ಬರಹ ಅಷ್ಟೇನೂ ಚೆನ್ನಿರದ,
ಈ ಹಳ್ಳಿಗಮಾರನ, ಹೆಣ್ಣೆಗಪ್ಪಿನ
ಕೆಂಗಣ್ಣಿನ ಕಚ್ಚೆ ಪಂಚೆಯವನ
ನಾ ಹೇಗೆ ಮೆಚ್ಚಿ ಕೊಳ್ಳಲಿ ಎಂದು !

ಇದೇ ಯೋಚನೆಯಲ್ಲಿ ಮುಳುಗಿದವನ
ಹಿಂಬದಿಯಿಂದ ಗೊತ್ತಾಗದಾಗೆ ಬಂದು
ಬಿಗಿದಪ್ಪಿದವಳ ಕಂಡು ಒಂದು ಕ್ಷಣ
ನಾನೇ ಬೆಕ್ಕಸ ಬೆರಗಾಗಿ ಹೋಗಿದ್ದೆ
ಹಾಯ್ ಜುಟ್ಟು ಮಾಮ್ ಕಂಗ್ರಾಟ್ಸ್
ಐ ಯಾಮ್ ಸೋ ಹ್ಯಾಪಿ ಯು ನೋ
ಅಂದಿನ ಹತ್ತಾರು ಪತ್ರಿಕೆಗಳ ಹಿಡಿದು
ಮುಖ ಪುಟದಲ್ಲಿನ ನನ್ನ ಭಾವ ಚಿತ್ರವ
ಅದರಲ್ಲಿನ ವಿಷಯವ ಓದಿ ಖುಷಿಗೊಂಡಿದ್ದೆ
ಭಾರತ ಸರ್ಕಾರದಿಂದ ಕೊಡ ಮಾಡುವ
ಸಾವಯವ ಕೃಷಿಯ ಹರಿಕಾರ
ಶ್ರೀ ಮಹೇಶ್ ರವರಿಗೆ ಕೃಷಿ ರತ್ನ ಪುರಸ್ಕಾರ
ಇದೇ ತಿಂಗಳು ಇಪ್ಪತ್ತಕ್ಕೆ
ರಾಷ್ಟಪತಿಗಳ ಭವನದಲ್ಲಿ ಪ್ರಧಾನ  !!!

5 comments:

  1. ಇದೇ ಸಂಗಮ ಇದೇ ಜೀವ ಯಾನ.
    ಇಲ್ಲಿನ ಕೃಷಿ ಅವಳಲ್ಲಿನ ವಿಜ್ಞಾನ ಬೇರೆಯಲಿ.
    ಹಸನುಗೊಳ್ಳಲಿ ಬದುಕೂ...

    ReplyDelete
  2. ಧನ್ಯವಾದಗಳು ಬದರಿ ಸರ್.

    ReplyDelete
  3. ಧನ್ಯವಾದಗಳು ಬದರಿ ಸರ್.

    ReplyDelete
  4. ಮದುವೆ ವಿಚಾರದಲ್ಲಿ ಹೇಗೆ ನಿರ್ಧಾರ ತೊಗೊಳುವುದೋ ತಿಳಿಯುವುದಿಲ್ಲ. ಇನ್ನೂ ಕೆಲವರು ತಮ್ಮ ತುಂಟುತನದ ಜೀವನದಿಂದ ಜವಾಬ್ದಾರಿಯುತ ಜೀವನ ನಡೆಸಲು ಹಿಂಜರಿಯುತ್ತಿರುತ್ತಾರೆ. ಮನೆಯವರ ನಿರ್ಧಾರದಿಂದಾಗಿ ಮದುವೆ ಮಾಡಿಕೊಂಡು ಮುಂದೆ ಬಂದದ್ದೆಲ್ಲಾ ಬಂದಂತೆ ನಡೆಸಿಕೊಂಡು ಹೋಗುವ ಗುಣ ಅತೀ ಮುಖ್ಯ. ನಿಮ್ಮ ಕಪ್ಪೆಚಿಪ್ಪಿನೊಳ ಮುತ್ತು.., ಹೊಳಿತಾ ಇರುವುದ ಕಂಡು ಸಂತೋಷವಾಯಿತು. ಚೆನ್ನಾಗಿದೆ ಸರ್. ಹೀಗೆಯೇ ಬರಿಯುತ್ತಾ ಇರಿ.

    ReplyDelete
  5. ಧನ್ಯವಾದಗಳು Sunil R Agadi ನಿಮ್ಮೆಲ್ಲರ ಪ್ರೋತ್ಸಾಹದ ನುಡಿಗಳೆ ನನ್ನ ಬರವಣಿಗೆಗೆ ಶ್ರೀರಕ್ಷೆ.

    ReplyDelete