Friday, August 16, 2013

" ಕೊಲೆಗಾತಿ "

ನೀ ನನಗಾದರೂ
ಹೇಳ ಬಹುದಿತ್ತು,
ನನಗೀಗಾಗಲೇ
ನಲ್ಲನಿಹನೆಂದು
ನೀ ಮುಚ್ಚಿಟ್ಟು ನನಗೆ
ದ್ರೋಹ ಬಗೆದೆ;
ನಿನ್ನ ಸರಳ ಸಜ್ಜನಿಕೆಗೆ
ತಲೆದೂಗಿ
ನಿನ್ನ ಅಪ್ರತಿಮ ರೂಪಕೆ
ನಾ ಮಾರು ಹೋಗಿ,
ಒಪ್ಪಿಗೆಯಿತ್ತು
ತಪ್ಪು ಮಾಡಿದೆನೇನೋ ॥

ನನ್ನಾ ನಿನ್ನ
ನಿಶ್ಚಿತಾರ್ಥದ ದಿನದಂದು,
ನೀನೆಷ್ಟು ಸಂಭ್ರಮಿಸಿದ್ದೆ
ಏನೂ ತಿಳಿಯದ ಮುಗ್ಧೆಯಂತೆ
ನಿನ್ನವನ ಬಳಿ ಕರೆತಂದು
ನನಗೆ ಪರಿಚಯಿಸಿದ್ದೆ;
ಹಾಗಲಾದರೂ
ನೀ ಹೇಳಬಹುದಿತ್ತು,
ಈ ಮದುವೆಯ
ಮುರಿಯ ಬಹುದಿತ್ತು,
ಒಣ ಪ್ರತಿಷ್ಟೆಯೋ
ಹರಕೆಯ ಕುರಿಯೋ
ನಾನಾಗ ಅರಿಯದಾದೆ ॥

ಒಂದು ಸುಂದರ ಸಂಜೆ
ಫೋನಾಯಿಸಿ ಬನ್ನಿ,
ಹಾಗೆಯೇ ಒಂದಷ್ಟು
ಸುತ್ತಾಡಿ ಬರುವ
ಇನ್ನೆರಡು ವಾರದಲಿ ನಮ್ಮ
ಮದುವೆಯಿದೆ, ಈಗ ಬೇಡ
ಮದುವೆಯಾದ ಮೇಲೆ
ಇವೆಲ್ಲಾ ಇದ್ದದ್ದೇ ಎಂದರೂ
ಬಿಡದೆ ನನ್ನ ಕರೆದ್ಯೊದಿದ್ದೆ
ನೀಲಾಕಾಶದಿ ಹಾರುವ
ಲೋಹದ ಹಕ್ಕಿಗಳ ತೋರಿಸಿ
ನನ್ನ ಮರಣಕೆ ಮುಹೂರ್ತವಿಟ್ಟು
ಎಷ್ಟು ಸಮಯೋಚಿತವಾಗಿ
ನೀ ಕೊಲ್ಲಿಸಿದ್ದೆ " ಕೊಲೆಗಾತಿ " ॥


4 comments:

  1. ಇಂತಹ ಮನ-ಮುರುಕರ ಬಗ್ಗೆ ನನಗೆ ಅಮಿತ ಕೋಪವಿದೆ.

    ReplyDelete
  2. ಇತ್ತೀಚಿಗೆ ಇದೆ ರೀತಿ ನಡೆದ ಸತ್ಯ ಘಟನೆಯೊಂದು ನೆನಪಿಗೆ ಬಂದು...

    ಇಂತಹ ಕೊಲೆಗಾತಿಯರಿಗೆ ದಿಕ್ಕಾರವಿರಲಿ..

    ನೋವಿನ ಸಂಗತಿಯನ್ನು ಕವನದ ಪದಗಳಲ್ಲಿ ಸೊಗಸಾಗಿ ಕಟ್ಟಿದ್ದಿರಿ...

    ReplyDelete
    Replies
    1. ಭಾಲಹರಿಯ ( ಕಲ್ಪನೆಯ ಭಾವಗಳ ಭೃಂಗದ ಬೆನ್ನೇರಿ ಹೊರಟವನಿಗೆ ) ನನ್ನ ಬ್ಲಾಗ್ ಗೆ ಬಲಗಾಲಿಟ್ಟು ನಿಮ್ಮ ಅನಿಸಿಕೆ, ಅಭಿಪ್ರಾಗಳಿಂದ ಮೆಚ್ಚುಗೆ ವ್ಯಕ್ಪಡಿಸಿದ ಸುಷ್ಮಮೂಡಬಿದರಿ ಯವರೇ ನನ್ನ ಧನ್ಯವಾದಗಳು. ಸದಾ ನಿಮ್ಮ ಅಮೂಲ್ಯವಾದ ಟೀಕೆ ಟಿಪ್ಪಣಿಗಳಿಗೆ, ಪ್ರೋತ್ಸಾಹಕ್ಕೆ ಸ್ವಾಗತ.

      Delete
  3. ಸಾಫ್ಟ್‌ವೇರ್ ಇಂಜಿನಿಯರ್ ವರನ, ಮನೆಯವರೊಟ್ಟಿಗೆ ಮನಸಾರೆ ಮೆಚ್ಚಿ, ತನಗೆ ಈಗಾಗಲೇ ಪ್ರಿಯಕರನಿರುವುದು ಮುಚ್ಚಿಟ್ಟು; ನಿಶ್ಚಿತಾರ್ಥವ ಮುಗಿಸಿ ಮಾಯಗಾತಿ ಕೊನೆಗೂ ಕೊಲೆ ಮಾಡಿಸಿಬಿಟ್ಟಳು. ಸದಾ ನನ್ನ ಪ್ರತಿ ಬರಹದಲ್ಲೂ ಸಲಹೆ ಅನಿಸಿಕೆ, ಅಭಿಪ್ರಾಯಗಳಿಂದ ಪ್ರೋತ್ಸಾಹಿಸಿ ಮತ್ತಷ್ಟು ಬರಹಗಳ ಬರೆಯಲು ಕಾರಣಕರ್ತರಾದ ಬದರಿನಾಥ ಪಲವಳ್ಳಿ ನಾ ಶರಣು ಶರಣಾರ್ಥಿ.

    ReplyDelete