Saturday, August 24, 2013

ಅನುಮಾನದ ನೆರಳು

ನಿನಗೇನಾಯಿತೆಂದು
ಈ ರೀತಿಯ ಸಿಟ್ಟು,
ಎಂದೂ ಕಾಣದ ಸಿಡುಕು
ನೀ ಏನೇನೋ
ನಿನ್ನ ಮನಸ್ಸಲ್ಲಿಟ್ಟುಕೊಂಡು
ನೀ ಹೀಗೆಲ್ಲಾ
ನನ್ನ ತಾಳ್ಮೆಯ ಕೆಣಕದಿರು
ಬಾಯಿ ಇದೆ ಎಂದು ಬಾಯಿಗೆ
ಬಂದಂತೆ ನೀ ಮಾತಾಡದಿರು
ನಾ ಎಂದಾದರು,
ನಿನ್ನನ್ನ ಹೀಗೆಲ್ಲಾ
ಅನುಮಾನದ ದೃಷ್ಟಿಯಲ್ಲಿ
ನಾ ನೋಡಿರುವೆನೆ
ಮದುವೆಯಾಗಿ
ಇಷ್ಟು ವರ್ಷಗಳಾದರೂ
ನಮಗೆ ಎರಡು
ಮುದ್ದಾದ ಮಕ್ಕಳಿದ್ದರೂ
ನನ್ನ ಸಹೋದ್ಯೋಗಿ
ಮಹಿಳೆಯ ಜೊತೆಗೆ
ಆತ್ಮೀಯವಾಗಿ
ಮಾತಾಡಿದರೆ ನಿನಗೆ
ಎಲ್ಲಿಲ್ಲದ ಅನುಮಾನದ
ವಕ್ರ ವಕ್ರ ಆಲೋಚನೆಗಳೆ !
ಹೆಂಡತಿಯಾದವಳಿಗೆ
ಇವೆಲ್ಲಾ ಇರಬೇಕ್ಕಾದ್ದೇ
ಕಾಳಜಿ, ಜಾಗ್ರತೆ
ಹಾಗೆಯೇ ಗಂಡನ ಬಗ್ಗೆ
ಗೌರವದ ನಂಬಿಕೆ
ಅದೆಲ್ಲವ ಬಿಟ್ಟು ಹೀಗೆ,
ಅನುಮಾನದ ಹುತ್ತವ
ಮೈಮನಸ್ಸುಗಳಲ್ಲಿ
ನೀ ಬೆಳೆಸಿಕೊಂಡರೆ
ಸಂಸಾರ ದಾರಿ ತಪ್ಪಿ
ನಿಸ್ಸಾರವಾಗದಿರದು ಎಚ್ಚರ !     
ಬೈದು ಹೊಡೆದು
ಬುದ್ಧಿ ಹೇಳೋಣವೆಂದರೆ
ನೀನೂ ಸಹ ವಿದ್ಯಾವಂತೆ,
ಮೇಲಾಗಿ ಉದ್ಯೋಗಿ
ಇಂದು ತಿಳಿದು ಕೊಳ್ಳುವೆ,
ನಾಳೆ ತಿಳಿಯುವೆ
ಎಂಬೆಲ್ಲಾ ಕನಸುಗಳಷ್ಟೆ,
ನಾ ಈಗ ಕಾಣ ಬೇಕಿದೆ !

2 comments:

  1. ಪತಿ ಸುರಸುಂದರನಾಗಿದ್ದಾರೆ ಇಂತವೇ ಸಮಸ್ಯೆಗಳು ಸ್ವಾಮೀ....

    ReplyDelete
  2. ಆರ್ಯ ಸುಂದರನಾಗಿದ್ದರೆ, ಭಾರ್ಯೆಗೆ ತನ್ನವನ ಮೇಲೆ ಸದಾ ಒಂದು ಕಣ್ಣು ! ಅಲ್ಲವೆ ಬದರಿಜೀ...

    ReplyDelete