Saturday, August 17, 2013

ಒಣ ಪ್ರತಿಷ್ಟೆ

ಹಠದಲ್ಲಿ ಇಬ್ಬರೂ
ಸರಿ ಸಮಾನರೇ
ಹಾಗೆಯೇ ಆಗಾಗ
ಮುನಿಸಿ ಕೊಳ್ಳುವುದರಲ್ಲಿ
ನನ್ನವಳದು ಎತ್ತಿದ ಕೈ;
ನಮ್ಮಿಬ್ಬರ ಜಗಳದಲಿ
ಪಾಪ, ಬಡಪಾಯಿ
ಮಕ್ಕಳ ಗತಿಯಂತೂ
ಆ ದೇವರಿಗೆ ಪ್ರೀತಿ ॥

ಬೇಡ ಬೇಡವೇ ರುಕ್ಕೂ
ಆ ಉದ್ಯೋಗದಾಸೆ,
ಜಂಜಾಟ, ನಿನಗೇಕೆ ಬೇಕು
ಈ ಮನೆ ಮಕ್ಕಳ ನನ್ನನ್ನ
ನೋಡಿಕೊಂಡರೆ ಸಾಲದೆ,
ಅಲ್ಲಿಯೂ ದುಡಿದು, ಸಾಕಾಗಿ
ನೀ ಇಲ್ಲಿಯೂ ದುಡಿಯಲಾರೆ;
ನಾ ಸಾಕಷ್ಟು ದುಡಿದು
ತಂದಾಕುವಾಗ, ತಿಂದುಂಡು
ನಮಗೂ ಒಂದಷ್ಟು ಬೇಯಿಸಿ
ಹಾಯಾಗಿ ಇರುವುದು ಬಿಟ್ಟು,
ನಿನ್ನದೆಂತಹದೇ
ಹೊಸ ಬಗೆಯ ವ್ಯಾಮೋಹ,
ಈ ಒಣ ಪ್ರತಿಷ್ಟೆ;
ನೆಮ್ಮದಿಯ ಜೀವನವ ಬಿಟ್ಟು
ನೀ ದುಡಿದು ಯಾರ ಉದ್ಧರಿಸ ಬೇಕು ॥

1 comment:

  1. ಗಂಡ ಹೆಂಡಿರಿಬ್ಬರೂ ದುಡಿಯಲು ಹೊರಟರೆ ಮಕ್ಕಳಿನ್ನೇನು ಕಲಿತಾವು ಮನೆಯಲ್ಲಿ.

    ReplyDelete