Sunday, July 28, 2013

ಓ ನನ್ನ ಮುದ್ದು ಕಂದ

ನಾ ಹೇಗೆ ಹೊಗಳಲಿ
ಓ ನನ್ನ ಮುದ್ದು ಕಂದಾ
ಈ ತಾಯ ಬಾಳಿನಲಿ
ನೀ ತಂದ ಆನಂದದಿಂದ
ನಾನಿಂದು ಜಗಮಾನ್ಯಳಾದೆ
ನಿನ್ನಿಂದ ತಾನೆ ನಾ ಧನ್ಯಳಾದೆ ॥

ಹತ್ತೂರ ಗುಡಿ - ಗೋಪುರ
ನಾ ಸುತ್ತಿ ಹತ್ತಿ ಬಂದರೂ
ಹೆತ್ತೊಡಲ ಕುಡಿ ನುಡಿಗಾಗಿ
ನಾ ಅತ್ತತ್ತು ಮನ ನೊಂದರೂ ॥

ಮುನ್ನೂರ ದೇವರನು
ಶರಣು ಶರಣೆಂದರು
ಮುತ್ತೆತ್ತಿರಾಯ ಮುತ್ತೆತ್ತಿ
ಕೊಟ್ಟಂತೆ ನಿನ್ನಿತ್ತನೋ ॥

ಬರುಡಾದ ನನ್ನ ಬಾಳ ಸಂಜೆಗೆ
ಬೆಳಕಾಗಿ ನೀ ಬಂದೆ ಈ ಬಂಜೆಗೆ
ನಾ ಹೇಗೆ ಮರೆಯಲಿ ನಿನ್ನನ್ನ
ಓ ನನ್ನ ಮುದ್ದು ಕಂದ ಚೇತನ ॥

ನೀ ನಡೆವಾಗ ನೋಡೋಕೆ
ಕಣ್ಣೆರಡೆರಡು ಸಾಲದೋ
ನೀ ತೊದಲು ನುಡಿವಾಗ
ಕೇಳೋಕೆ ಕರ್ಣಾನಂದವೋ ॥

ನೀ ತಬ್ಬಿ ನನ್ನ ಹಿಡಿವಾಗ
ಎದೆಯುಬ್ಬಿ ಬಂತು ಕುಡಿವಾಗ
ಅಮೃತದ ಸಿಹಿ ಸಿಂಚನ
ನೀ ನಕ್ಕಾಗ ಮನ ಮನೆಯು
ಹಾಲ್ಬೆಳದಿಂಗಳ ಬೃಂದಾವನ ॥

7 comments:

  1. Replies
    1. ಧನ್ಯವಾದಗಳು Santhoshkumar LM.ಮದುವೆಯಾಗಿ ಹತ್ತಾರು ವರ್ಷಗಳಾದರೂ ತನ್ನೊಡಲ ಕುಡಿಯ ಕಣ್ತುಂಬ ಕಾಣಲು ಎಲ್ಲಾ ತಾಯಂದಿರತೆ ನನ್ನ ಕತಾ ನಾಯಕಿಗೂ ಅಸೆ. ಕೊನೆಗೆಲ್ಲಿ ತನಗೆ ಮಕ್ಕಳಾಗದೆ ಹಾಗೆಯೇ ಬಂಜೆಯಾಗಿ ಉಳಿವೆನೋ ಎಂಬ ಭಯ, ಅಂತೂ ಇಂತು ಮಗುವಾದಾಗ ಅವಳ ಸಂತೋಷ ಅಷ್ಟಿಷ್ಟಲ್ಲ.

      Delete
    2. ಧನ್ಯವಾದಗಳು Santhoshkumar LM.ಮದುವೆಯಾಗಿ ಹತ್ತಾರು ವರ್ಷಗಳಾದರೂ ತನ್ನೊಡಲ ಕುಡಿಯ ಕಣ್ತುಂಬ ಕಾಣಲು ಎಲ್ಲಾ ತಾಯಂದಿರತೆ ನನ್ನ ಕತಾ ನಾಯಕಿಗೂ ಅಸೆ. ಕೊನೆಗೆಲ್ಲಿ ತನಗೆ ಮಕ್ಕಳಾಗದೆ ಹಾಗೆಯೇ ಬಂಜೆಯಾಗಿ ಉಳಿವೆನೋ ಎಂಬ ಭಯ, ಅಂತೂ ಇಂತು ಮಗುವಾದಾಗ ಅವಳ ಸಂತೋಷ ಅಷ್ಟಿಷ್ಟಲ್ಲ.

      Delete
  2. ಎತ್ತಿ ಮುದ್ದಾಡಲೇ ಎನ್ನುವಷ್ಟು ಮುದ್ದಾಗಿದೆ ಈ ಕವನ ಬಾಲೆ...

    ReplyDelete
    Replies
    1. ಹೆತ್ತೊತ್ತು ಮಗುವ ಮುದ್ದಿಸಿದಾಗಲೇ ಹೆತ್ತವಳಿಗೂ ಸಂಭ್ರಮ ಸಡಗರ ಅಲ್ಲವೆ ಗೆಳೆಯ.

      Delete
  3. super chenna avre. tumba chennagide

    ReplyDelete
    Replies
    1. ಧನ್ಯವಾದಗಳು Prashanth Joshi ನಿಮ್ಮೆಲ್ಲರ ಮೆಚ್ಚುಗೆಗೆ ಹಾಗು ಅನಿಸಿಕೆಗಳಿಗೆ. ಸದಾ ಹೀಗೆಯೇ ಇರಲಿ ಅನವರತ ಸ್ನೇಹ.

      Delete