Sunday, August 11, 2013

ರಾಶಿಫಲ

ನನ್ನವಳದು ನನ್ನದು
ಒಂದೇ ರಾಶಿ ,
ಫಲ ಸಮಸಮವೆಂದು
ನನಗೆ ಖುಷಿಯೋ ಖುಷಿ
ನಾಮವೊಂದೆ,
ನಕ್ಷತ್ರ ಬೇರೆಬೇರೆ
ಗಾಂಪ ಗಾಂಪಿ;
ಇದೂ ಒಂದು ಹೆಸರೇ
ಎಂದು ನಗದಿರ ಬೇಡಿ,
ಮುಂದಿದೆ ನೀವೇ ನೋಡಿ ॥

ವಾರಭವಿಷ್ಯಕೆ ನಾ
ಪರದಾಡ ಬೇಕಿಲ್ಲ,
ನನ್ನವಳ ಮುಖದಾಳ
ತಿಳಿದರೆ ಸಾಕಲ್ಲ;
ಅವಳೇ ನನ್ನ ಪ್ರಶ್ನಿಸಿ
ಅವಳೇ ಉತ್ತರಿಸಿ,
ರ್ರೀ.... ನಿಮ್ಮದು
ಹೀಗೆ, ಹಾಗೆಯೇ
ವಾರಾಂತ್ಯದೊಳಗೆ
ಬಂಪರ್ ಲಾಟರಿ;
ಸಾಹಿತಿಯ ಪ್ರಿಯೆಗೆ
ಸನ್ಮಾನ ಭರ್ಜರಿ ॥

ಅಯ್ಯೋ.....
ಉಬ್ಬಸ ನಿಮಗೆ,
ಅಲ್ಲಾ ನಮಗೆ
ವಿದೇಶ ಪ್ರವಾಸ,
ಲಕ್ಷ್ಮೀಕೃಪಾ ಕಟಾಕ್ಷ;
ಮತ್ತಷ್ಟು ಇನ್ನಷ್ಟು
ಸುದ್ದಿಯ ಗುದ್ಧಿ
ತಲೆ ತುಂಬುವಳು
ಸ್ಪೂರ್ತಿಯ ಸಿದ್ಧಿ ॥

ಆದರೂ...
ಒಮ್ಮೊಮ್ಮೆ ,
ಅಳುಕದೆ ಮನದನ್ನೆ
ಮೂದಲಿಸುವಳು
ಎನಗೆ,
ಹೆದರದು ಕಾಗೆ !
ನಿಮಗೆ ?
ಕಾರಣವಿಷ್ಟೆ;
ನನ್ನ ಬಣ್ಣ ಕಡು ಕಪ್ಪು
ಗ್ರಹಚಾರ
ಅವಳ
ಕೈಹಿಡಿದಿದ್ದು ನನ್ನ ತಪ್ಪು ॥

2 comments:

  1. ವಿಷಯ ಜೋಡಣೆಯಲ್ಲಿ ಅರ್ಧ ಗೆದ್ದರೆ. ವ್ಯಂಗ್ಯದ ಮೊನಚಲ್ಲಿ ಇನ್ನೂ ಗೆದ್ದಿದ್ದೀರಿ.

    ReplyDelete
  2. Badarinath Palavalli ಸರ್, ಈ ನಿಮ್ಮ ಆದರಾಭಿಮಾನಕ್ಕೆ ನಾ ಎಂದೂ ಚಿರಋಣಿ. ಈ ಕವನವ 1986ರಲ್ಲಿ ಬರೆದದ್ದು.

    ReplyDelete