Tuesday, August 13, 2013

ಅತಿಥಿ

ಅಪರೂಪಕ್ಕೊಮ್ಮೆ
ಅತಿಥಿಯಾಗಿ,
ಮನೆಗೆ ಬಂದರೆ
ಎಲ್ಲರಿಗೂ ಸಂತಸ;
ಬಂದವರಿಗೂ ಗೌರವಾದರ
ಮನೆ ಮಡದಿ ಮಕ್ಕಳ ಬಿಟ್ಟು
ಹೀಗೆ ವಾರಗಟ್ಟಲೆ
ನಿಮ್ಮಣ್ಣ ಬಂದು,
ಕುಳಿತರೆ ಹೇಗೆ
ಇದೇನು ಹಳ್ಳಿಯೆ
ಪೇಟೆ ಸ್ವಾಮಿ ಪೇಟೆ
ಪ್ರತಿ ವಸ್ತುವಿಗೂ
ದುಪ್ಪಟು ಬೆಲೆತೆತ್ತು ತರಬೇಕು
ನನಗೂ ಬೇಯಿಸಿ ಸಾಕಾಯ್ತು ॥

ನೀ ಸಾಕು ಮಾಡೇ ಮಾರಾಯ್ತಿ,
ನಿನ್ನ ಅರ್ಥವಿಲ್ಲದ ಗೊಣಗಾಟ
ನಿನ್ನ ಅಪ್ಪಾ ಅಮ್ಮ ಬಂದರೆ;
ತಿಂಗಳು ಗಟ್ಟಲೆ ಇದ್ದರೂ
ವಟಗುಟ್ಟದವಳು,
ನಮ್ಮವರು ಬಂದರೆ
ನಿನಗೆಲ್ಲಿಲ್ಲದ ಅಸಡ್ಡೆಯೆ ;
ಅವರಿಗೆ ರಾಜೋಪಚಾರ
ನಮ್ಮವರಿಗೆ ಬಾಯ್ಮಾತಿನ
ಉಪಚಾರ, ತಿರಸ್ಕಾರ
ಇದೇ ಮೊದಲು
ಇಂದೇ ಕೊನೆಯಾಗ ಬೇಕು;
ನಿನ್ನೆಲ್ಲಾ ತಾರತಮ್ಯದ
ತರಲೆ ಹುಚ್ಚಾಟಗಳು,
ಕೊನೆಗೊಳ್ಳದಿದ್ದರೆ
ನಾ ನಿನ್ನನ್ನೇ ಕಡೆಗಾಣಿಸುವೆ
ನಿನಗಿರಲಿ  ಮೈಮೇಲೆ ಎಚ್ಚರ

1 comment:

  1. ಅದು ಹಂಗೇ ಸಾರ್, ಹೆಂಡತಿ ಮನೆ ಕಡೆ ಅತಿಥಿಗಳಿಗೆ ಸಂತರ್ಪಣೆ, ಗಂಡನ ಕಡೆಯವರಿಗೆ ತಿಥಿ!

    ReplyDelete