Sunday, August 11, 2013

ಭಯವೇಕೆ ನಾ ಅಳಲೇಕೆ ?

ಅಳದಿರು ಕಂದಾ
ನೀನೆಂದೂ ಅಳದಿರು,
ಗುಮ್ಮಾ ಬರುವಾ
ನಿನ್ನೇ ಹಿಡಿದೇ ಬಿಡುವ
ನಗುತಿರು ಎಂದೆಂದು ;
ಚುಕ್ಕಿ ಚಂದ್ರನ
ಚಕ್ಕುಲಿ ಉಂಡೆ
ತಂದು ಕೊಡುವೆ,
ಅಪ್ಪನಿಗೆ ಹೇಳಿ
ಆನೆಯ ಮರಿಯ
ಗಿಳಿಯ ಮರಿಯ,
ನವಿಲಿನ ಗರಿಯ
ಬಣ್ಣದ ತಗಡಿನ
ತುತ್ತೂರಿಯ;
ನಿನಗೆ ತರಿಸಿ
ನಾ ಕೊಡುವೆ
ಅಳದಿರು ಕಂದ
ನೀ ಅಳದಿರು ॥

ಇವೆಲ್ಲಾ
ಈ ಕಾಲಕೆ ,
ಹಳೇದಾಯ್ತಮ್ಮಾ....
ಇವೆಲ್ಲ ಈಗಲೆ
ನನಗೇ ಬೇಡಮ್ಮಾ.....
ಮೊಬೈಲು ನೀ ಕೊಡಿಸು
ಕಂಪ್ಯೂಟರ್ ಕೊಡಿಸು,
ಕೋಕ ಕೋಲ ಕುಡಿಸು
ಫಿಜ್ಜಾ ಬರ್ಗರ್ ತಿನಿಸು
ಆ ಗುಮ್ಮನ ನೀ ಕರೆಸು
ಭಯವೇ ಇಲ್ಲವೆ ಇಲ್ಲಾ
ಓ ನನ್ನಾ ಮುದ್ದಿನ ಅಮ್ಮಾ ॥

2 comments:

  1. ಸರಿಯಾಗಿದೆ ಮಗುವಿನ ಪಟ್ಟಿ, ಆ ಪಟ್ಟಿಯೇ ಅಮ್ಮನಿಗೆ ಗುಮ್ಮ...

    ReplyDelete
  2. ಈ ಯಾಂತ್ರಿಕ ತಾಂತ್ರಿಕ ಯುಗದಲ್ಲಿ, ಈಗಿನ ಮಕ್ಕಳಿಗೆ ಕಂಡಕಂಡದ್ದೆಲ್ಲಾ ಬೇಕು.ಅದರಂತೆ ಅಪ್ಪಾ ಅಮ್ಮರು ತುದಿಗಾಲ ಬೆರಳ ಮೇಲೆ ನಿಂತಿರುವರು.

    ReplyDelete