Monday, August 19, 2013

" ಬಾಡಿಗೆ ತಾಯಿ "

ನಾ ನಿನ್ನಾ ಹಡೆದವ್ವ,
ಎತ್ತಿ ಮುದ್ದಾಡಲಿಲ್ಲ
ನಿನ್ನಾ ನಾ ಹೊತ್ತು;
ಎದೆಗಪ್ಪಿ ತಿರುಗಾಡಲಿಲ್ಲ
ಎದೆಯ ಹಾಲನು ಕುಡಿಸಿ,
ನಿನ್ನಾ ನಗುವ ನಾ ನೋಡಲಿಲ್ಲ
ಅಳುವಾಗ ನಿನ್ನ ನಾ ರಮಿಸಲಿಲ್ಲ;
ಜೋ ಜೋ ಜೋ ಮುದ್ದು ಕಂದಾ
ನೀ ಮಲಗೆಂದು ನಾ ಹಾಡಲಿಲ್ಲ ॥

ಈ ನತದೃಷ್ಟೆ ತಾಯಿ ಪಾಪಿಷ್ಟಳಲ್ಲ
ನಿನ್ನ ಹಡದೇ, ನಾ ಹಣವ ಪಡೆದೆ
ಏಳೇಳು ಜೊತೆ ಹೆಜ್ಜೆಗಳ ಇಡದಲೇ
ಏಳೂ ಬೀಳುಗಳಲಿ ನಾ ಬಿದ್ದೇಳುತಲಿ, ದಾಂಪತ್ಯದಾನಂದವ ಕಾಣದಲೇ
ಪರರಿಗೆ ಮೈ ಮಾರಿಕೊಳ್ಳದೆಲೆ,
ಇನ್ಯಾರದೋ ತೆಕ್ಕೆಗೆ ನಾ ಜಾರದೆ
ನನ್ನಾ ಕಷ್ಟ ಕಾರ್ಪಣ್ಯಕೆ
ನಾ ನಿನ್ನ ಹಡೆದಂತ ತಾಯಿ;
ಬಾಡಿಗೆ ತಾಯಿ ನಾ ಬಾಡಿಗೆ ತಾಯಿ ॥

1 comment:

  1. ಹಲವಾರು ಕಾರಣಗಳಿಂದ ಮಕ್ಕಳನ್ನು ಪಡೆಯಲಾರದ ದಂಪತಿಗಳಿಗೆ ವರದಾನ ಈ ಬಾಡಿಗೆ ಗರ್ಭ. ವಾದ ವಿವಾದಗಳು ಏನೇ ಇರಲಿ, ಇವರ ಉಪಕಾರ ಸ್ಮರಣೀಯ...

    ReplyDelete