Friday, August 23, 2013

ಶ್ರಾವಣೀ

ನೀವು ಸುಮ್ಮನಿದ್ದು ಬಿಡಿ
ನನ್ನ ಮಾತಾಡಿಸದೆ,
ಮುಖ ಊದಿಸಿ ಕೊಂಡು
ಬಿಮ್ಮನೆ ಕೂತವಳ ಕಂಡು,
ನಗು ತಡೆಯಲಾಗದೇ
ನನ್ನೊಳಗೆ ನಾ ನಕ್ಕಿದ್ದೆ;
ಜೋರಾಗಿ ನಗುವಂತಿಲ್ಲ
ಮತ್ತೆ ಮುನಿಸಿ ಕೊಂಡಾಳು
ಹಾಳಾದ್ದು ಬಸ್ಸು ಮಿಸ್ಸಾಗಿ,
ಐದಾರು ಮೈಲಿ ನಡೆದು ನಡೆದೂ
ಸುಸ್ತಾಗಿ ಬಂದವನ ಗಮನಿಸದೇ,
ನನ್ನವಳು ಉಪಚರಿಸುವುದ ಬಿಟ್ಟು
ಹೀಗೆ ಕೋಪಗೊಂಡರೆ ಹೇಗೆ ಸ್ವಾಮೀ;
ಇದೇನು ಸಿಟಿಯೇ, ಬೇಕೆಂದಾಗ
ಬಸ್ಸು, ಆಟೋ ಟ್ಯಾಕ್ಸಿಗಳು ಸಿಗಲು
ಮಲೆನಾಡಿನ ಮೂಲೆಯೊಂದರ ಚಿಕ್ಕ
ಹಳ್ಳಿಯವಳು ನನ್ನ ಮನಮೆಚ್ಚಿದವಳು
ನನಗೂ ಮಾತಾಡಿಸಿ ಸಾಕಾಗಿ,
ಎಷ್ಟು ರಮಿಸಿದರೂ ಕೇಳದವಳ
ಮೆಲ್ಲ ಕಿವಿ ಕಚ್ಚಿ ನಾನಿನ್ನು ಬರುವೆ
ಇಷ್ಟು ಹೇಳಿದರೂ ಇಷ್ಟಪಡದವಳು
ನನಗೂ ನಿನಗೂ ಇನ್ನು ಆಗಿ ಬರದು
ನಾ ಬೇಕಿದ್ದರೆ ನನ್ನ ಬಳಿ ನೀ ಬಾ....
ನಾ ಈಗಲೇ ಊರಿಗೆ ಹೊರಟೆ, ನಿನ್ನಿಷ್ಠ
ಅಳುಅಳುತ ಬಂದು ಬಿಗಿದಪ್ಪಿದವಳ
ನಗು ನಗುತ ನಾ ಸಂತೈಸಿ ಅಪ್ಪಿದ್ದೆ !!!

2 comments:

  1. ರಾಯರು ಬಂದರು ಮಾವನ ಮನೆಗೆ....

    ReplyDelete
  2. ಆಷಾಡ ಕಳೆದು ಶ್ರಾವಣಮಾಸದ ಸಂಭ್ರಮದಲ್ಲಿ ತವರಿಗೆ ಹೋದವಳ ಕರೆತರಲು ಹೋದವನ ಪಜೀತಿ ಇದು. ಧನ್ಯವಾದಗಳು ಪಲವಳ್ಳಿ ಸರ್.

    ReplyDelete