ನಿದಿರೇsssss,
ನೀ ಬರದೆ ಏಕೆ
ಎಲ್ಲಿ ಅಡಗಿ ಕುಳಿತೆ;
ಒಳಗು ಹೊರಗೂ
ಈ ನನ್ನ ನೋವಿಗೆ
ಬಂದು ಲಾಲಿ,
ಹಾಡ ಹಾಡದೆ
ಮನಸಿನೊಳಗೆ
ಅವಳ ನೆನಪು;
ಕಣ್ಣ ತುಂಬಿ ಹರಿವ ನೀರು
ಹೆಣ್ಣ ನಂಬಿ ಬರಿದೆ ನೋವು
ಮರೆಯಲೇಗೆ ನೀ ಹೇಳದೆ ॥
ನೀ ಬರದೆ ಏಕೆ
ಎಲ್ಲಿ ಅಡಗಿ ಕುಳಿತೆ;
ಒಳಗು ಹೊರಗೂ
ಈ ನನ್ನ ನೋವಿಗೆ
ಬಂದು ಲಾಲಿ,
ಹಾಡ ಹಾಡದೆ
ಮನಸಿನೊಳಗೆ
ಅವಳ ನೆನಪು;
ಕಣ್ಣ ತುಂಬಿ ಹರಿವ ನೀರು
ಹೆಣ್ಣ ನಂಬಿ ಬರಿದೆ ನೋವು
ಮರೆಯಲೇಗೆ ನೀ ಹೇಳದೆ ॥
ಒಲವೇsssss,
ನೀ ಬರದೆ ಏಕೆ
ನನ್ನ ಮರೆತು
ನೀ ಎಲ್ಲಿ ಎಲ್ಲಿ;
ಅಲೆಯುತಿರುವೆ
ಈ ಹೃದಯದೊಳಗೆ
ನೀ ಬೆಸದ ಪ್ರೀತಿ,
ಪ್ರೇಮ ಬಂಧನ
ನಿನಗೆ ಕಾಲ ಕಸವೆ ಆಯಿತೆ
ನೂರು ಭಾವ ನೂರು ನೋಟ
ನೂರು ಒಲುಮೆ ಬಾಳ ಪಥಕೆ
ಬಿರಿದ ಭೂಮಿಯಾಯಿತೇಕೆ ॥
ನೀ ಬರದೆ ಏಕೆ
ನನ್ನ ಮರೆತು
ನೀ ಎಲ್ಲಿ ಎಲ್ಲಿ;
ಅಲೆಯುತಿರುವೆ
ಈ ಹೃದಯದೊಳಗೆ
ನೀ ಬೆಸದ ಪ್ರೀತಿ,
ಪ್ರೇಮ ಬಂಧನ
ನಿನಗೆ ಕಾಲ ಕಸವೆ ಆಯಿತೆ
ನೂರು ಭಾವ ನೂರು ನೋಟ
ನೂರು ಒಲುಮೆ ಬಾಳ ಪಥಕೆ
ಬಿರಿದ ಭೂಮಿಯಾಯಿತೇಕೆ ॥
ಒಲವೇsssss,
ReplyDelete(ಕೇಳಿಸಿತಂತೆ....)
ಧನ್ಯವಾದಗಳು ಬದರಿಜಿ, ನಾ ಹೇಳಿ ಹೇಳಿ ಸಾಕಾಗಿತ್ತು; ಏನು ಹೇಳಿದಿರೋ ಏನೋ ನನ್ನೊಲವ ಕರೆಗೆ ಓಗೊಟ್ಟು ಅವಳು ಬಂದಿಹಳು. ಮನದ ದುಗುಡಗಳ ಮರೆತು ನಿರಾಭರಣ ಸುಂದರಿಯ ಎದೆಗೊರಗಿ ನಿದ್ರಿಸುತ್ತಿರುವೆ.
ReplyDelete