Friday, August 23, 2013

" ಶ್ರಾವಣೀ ಪೂರ್ಣಮಿ "

ಏನೂ ಮುಚ್ಚಿಡದೆ ನನ್ನ ಬಳಿ
ನನಗೆಲ್ಲಾ ನಿಜ ಹೇಳಿ,
ಮನೆ ಕೆಲಸದವಳಂತೆ ಕಾಣವ
ನಿಮ್ಮ ಕಂಡರೇಕೋ ದೇವರನ್ನು
ಕಂಡಂತಹ ಶ್ರದ್ಧಾಭಕ್ತಿ;
ಆ ಕಣ್ಣಗಳಲಿ ಸಂತಸದ ಹೊಳಪು
ಒಂದೇ ಸಮ ನನ್ನವಳು ಪ್ರಶ್ನಿಸಿ
ನನ್ನ ತಬ್ಬಿಬ್ಬಾಗಿಸಿದ್ದಳು;
ಇದು ಎಂಥಹದೇ ನಿನ್ನನುಮಾನ
ಯಜಮಾನನಲ್ಲಿ ಇರಬೇಕಾದ್ದೇ ಗೌರವ,
ಪತಿಭಕ್ತಿ ಐ ಮೀನ್
ಮನೆ ಯಜಮಾನನಲ್ಲಿ ಭಯಭಕ್ತಿ;
ನೀ ರಸ್ತೆ ದಾಟುವಾಗ
ಅಪಘಾತವಾಗಿ ರಕ್ಷಿಸಿ,
ಆಸ್ಪತ್ರೆಗೆ ಸೇರಿಸಿ
ನಿನ್ನ ಕಾಪಾಡಿದರೆಂದು,
ಮನೆಗೆ ಕರೆತಂದು
ಕೆಲಸಕ್ಕೆ ಇಟ್ಟುಕೊಂಡವಳು ನೀನು
ಈ ಆರು ತಿಂಗಳುಗಳಲಿ
ನಿನಗೆ ಅಚ್ಚು ಮೆಚ್ಚು; ಹೀಗಿರುವಾಗ
ನೀ ಏನೇನೋ ಹೀಗೆಲ್ಲಾ ಯೋಚಿಸಿ
ಚಿಂತಿಸಿ ಆಯಾಸ ಮಾಡಿ ಕೊಳ್ಳದಿರು
ಆಫೀಸಿಗೆ ಟೈಮ್ ಆಯಿತು ನಾ ಬರುವೆ  !!!!

2 comments:

  1. ಅನುಮಾನಾಸ್ಪದ, ಹುಷಾರೂ...

    ReplyDelete
  2. ಮದುವೆಗೆ ಮುಂಚೆ ಮನಸಾರೆ ಪ್ರೀತಿಸಿ, ಕೈಹಿಡಿದು ಬಾಳಸಂಗಾತಿಯಾಗಿ, ಪಡೆಯಬೇಕೆಂದು ಕೆಲಸದ ಭೇಟೆಗೆ ಹೊರಟವನ ಬಾಳಲಿ ದುರ್ವಿಧಿ ಆಟವಾಡಿತ್ತು.ಪ್ರೀತಿಸಿದವಳು ಆಕಸ್ಮಿಕ ಮರಣಕೆ ತುತ್ತಾಗಿ ಸತ್ತಳೆಂದು ತಿಳಿದು ವರ್ಷಗಳವರೆಗೂ ನೋವಿನಲಿ ಕಳೆದು ಮನೆಯವರ ಒತ್ತಾಯಕ್ಕೆ ಬೇರೊಂದು ಹೆಣ್ಣ ಮದುವೆಯಾಗಿದ್ದು ಎಂಥಾ ವಿಪರ್ಯಾಸ. ಅದೇ ಹೆಣ್ಣು ಅಪಘಾತದಲಿ ಸಿಲುಕಿದವಳ ಆಸ್ಪತ್ರೆಗೆ ಸೇರಿಸಿ ಬದುಕಿಸಿ ನನ್ನ ಎದುರೇ ನಿಂತಾಗ ಪ್ರೀತಿಸಿದವಳು ಒಂದುಕಡೆ, ಕೈಹಿಡಿದವಳು ಒಂದುಕಡೆ ಇವರಿಬ್ಬರ ನಡುವೆ ನಾನು ! ಧನ್ಯವಾದಗಳು ಬದರಿನಾಥ ಪಲವಳ್ಳಿ ಸರ್.

    ReplyDelete