Thursday, August 8, 2013

ಗೀತಾ ಆಂಟಿ

ಈ ಕಾಲಗರ್ಭದೊಳಗೆ
ಗತಿಸಿ ಹೋಗುವ ಮುನ್ನ
ಬಾಳು ನಾವಂದು ಕೊಂಡಂತೆ
ಎಡವದೇ ನಡೆದರೆಷ್ಟು ಚೆನ್ನ
ನಾನೇನು ಬಯಸಿ ಪಡೆದದ್ದಲ್ಲ
ಈ ಬದುಕ, ಈ ಕುಲಗೆಟ್ಟ ಕಸುಬ ॥

ಈಗೆಲ್ಲಾ ಹೇಳುವವರೆ
ತಲೆಹಿಡುಕಿ, ಕುಲಟೆ
ಮೋಸಗಾತಿ ಎಂದೆಲ್ಲಾ
ಹಣ್ಣ ಚಪ್ಪರಿಸುವಾಗ
ಕಣ್ಣು ಕಂಡಿರಲ್ಲವೇನೋ;
ಹದಿ ಹರೆಯದರಿಂಡಿದು
ಕಾಡು ಬಾ ಬಾ ಎನ್ನುವವರಿಗೂ
ಮುಪ್ಪಿಟ್ಟರೂ ಕದಪು ಕಪ್ಪಿಟ್ಟರೂ
ತೀಟೆ ತೀರಿಸಿ ಕೊಳ್ಳಲು ನಾ ಬೇಕಿತ್ತು ॥

ನನ್ನವರು, ತನ್ನವರ ತೊರೆದು
ಪ್ರೀತಿಸಿದನ ಜೊತೆ ಬಂದವಳು
ನಾ ಆಗ ತುಂಬು ಗರ್ಭಿಣಿ,
ಗಂಡನ ಅಕಾಲಿಕ ಮರಣ
ಮೊದಮೊದಲು ಅಧೀರಳನ್ನಾಗಿಸಿತು
ಬಾಳಿನ ಬಂಡಿಯ ದೂಡಲು
ಮೈಮಾರಿ ಕೊಳ್ಳುವವಳಿಗೆ ನೆರವಾಗಿದ್ದೇ
ಒಂದಷ್ಟು ದುಡ್ಡು ನಾ ನೋಡುವಂತಾಗಿದ್ದು
ನಾನೇನೂ ಮೈಮಾರಿ ಕೊಳ್ಳಬೇಕಿರಲಿಲ್ಲ
ಬಂದ ಗಿರಾಕಿಗಳಿಗೆ ಹೆಣ್ಣುಗಳ ಹೊಂದಿಸಿ
ನನ್ನ ಮನೆಯ ಶಯನಾ ಗೃಹವಾಗಿಸಿದ್ದೆ ॥


2 comments:

  1. ಯಾಕೋ ಮನಸ್ಸಿಗೆ ಕಸಿವಿಸಿ, ಕಣ್ಣಂಚಿನಲ್ಲಿ ಒದ್ದೆ ಒದ್ದೆ...

    ReplyDelete
    Replies
    1. ಹೆಣ್ಣ ಅಸಹಾಯಕತೆಯ ತಮಗೇ ಹೇಗೆ ಬೇಕೋ ಹಾಗೆ ಬಳಸಿಕೊಳ್ಳುವ ಮಂದಿ, ಅವಳ ಸರ್ವಸ್ವವ ತಿಂದು ತೇಗಿ ನುಣಿಚಿ ಕೊಳ್ಳುವವರೇ ಕೊನೆಗೊಮ್ಮೆ ಇಂಥಹ ದರೀದ್ರದವಳೇ ನಮ್ಮ ಅಕ್ಕ- ಪಕ್ಷದಲ್ಲಿಷ್ಟು ದಿನ ಇದ್ದವಳೇ ನಮ್ಮ ಮಕ್ಕಳಿಗೂ ಇವಳ ಕೆಟ್ಟ ಚಾಳಿಯ ಕಳಿಸಿಯಾಳು; ಒದ್ದೋಡಿಸಿ ಪೀಡೆಯನ್ನ ಎಲ್ಲಿ ನಮ್ಮ ಹೆಸರು ಬೀದಿಗೆ ಬರುವುದೋ ಎಂಬ ಭಯಕೆ ನೀಚ ಬುದ್ಧಿಯ ತೋರುವ ಜನಕೆ ದಿಕ್ಕಾರವಿರಲಿ.ಧನ್ಯವಾದಗಳು ಪಲವಳ್ಳಿ ಸರ್.

      Delete