ಭಾವ ಲಹರಿ
Tuesday, March 26, 2013
" ಮೋಹಿನಿ - ಭಸ್ಮಾಸುರ "
ನೀ ಧರೆಗಿಳಿದು ಬಂದ ಅಪ್ಸರೆಯೋ
ನಿವಾಳಿಸೆಸೆದ ಚೆಂದಿರನ ಪ್ರಭೆಯೋ
ಸುಡದಿರದು ನನ್ನ, ನಿನ್ನ ಪ್ರೇಮಾಗ್ನಿ
ಕಾಮನೆಗಳಿಗೆ ಕಿಚ್ಚಚ್ಚುವ ದಾವಾಗ್ನಿ
ಹುಡುಕಿದರೂ ಎಲ್ಲೂ ಸಿಗದಲ್ಲೇ
ಒಂದಿನಿತು ಕೃಷ್ಣ ವರ್ಣದ ಕಲೆ
ಹಾಲ್ಗಡಲಿಗೂ ಬಿಳುಪು ನಿನ್ನ ಚೆಲುವು
ಕಣ್ಣಗಡಲಿಗೂ ಹೊಳಪು ನಿನ್ನ ಒಲವು
ರಂಭಾ ಊರ್ವಶಿ ನಿನ್ನ ಉಂಗುಷ್ಟಕ್ಕೂ
ಸಮರಲ್ಲ !
ರಂಭೆ ಕೊಂಬೆಗಳು ತಂಗಾಳಿಯ ಹೊತ್ತು ಬೀಸದಿರಲ್ಲ!
ನಾನೇ ನಾನೆಂದರೆ ಈ ಜಗ
ದಿಕ್ಕಾ ಪಾಲು !
ಎನಗೆ ಸರಿಸಾಟಿಯೇ ಈ ಜನ
ಆ ಮುಕ್ಕಣ್ಣನು !
ಮದ ಗಜಗಳಿಗೂ ಮದ ಅಡಗಿಸುವ
ಮೋಹಿನಿಯೇ ನೀ ಯಾರೆ ?
ಮನ್ವಂತರಗಳಿಗೂ ಅಂತರವನಿತ್ತವ
ಭಯಂಕರ ಭಸ್ಮಾಸುರ ನಾನೆ !
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment